Select Your Language

Notifications

webdunia
webdunia
webdunia
webdunia

ಸಚಿವ ಈಶ್ವರಪ್ಪ ಅವರ ಮಗಳ ಮೊಬೈಲ್ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ

ಸಚಿವ ಈಶ್ವರಪ್ಪ  ಅವರ ಮಗಳ ಮೊಬೈಲ್ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ
ಬಾಗಲಕೋಟೆ , ಗುರುವಾರ, 26 ಸೆಪ್ಟಂಬರ್ 2019 (12:01 IST)
ಬಾಗಲಕೋಟೆ : ಕಳೆದುಹೋದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಮಗಳ  ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.




ಈಶ್ವರಪ್ಪ ಅವರ ಬೆಂಗಳೂರು ಗಾಂಧಿಭವನದ 41 ನಂ ನಿವಾಸದಿಂದ ಸೆಷ್ಟೆಂಬರ್ 13 ರಂದು ಸಚಿವ ಈಶ್ವರಪ್ಪ ಅವರ ಮಗಳು ಕೆ ಶಾಂತಾ ಅವರ ಮೊಬೈಲ್ ಕಳೆದು ಹೋಗಿತ್ತು. ಈ ಬಗ್ಗೆ ಅವರು ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.


ದೂರಿನ ಆಧಾರದ ಮೇಲೆ ಶಾಂತಾ ಅವರ ಮೊಬೈಲ್ ನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಬಾಗಲಕೋಟೆಯ ಬಂಟನೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಪತ್ತೆಯಾಗಿದೆ. ಇದೀಗ ಪೊಲೀಸರು ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೋಯಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ ಅಹ್ಮದ್ ಪಟೇಲ್