Select Your Language

Notifications

webdunia
webdunia
webdunia
webdunia

ಶಾಸಕರ ಅಧ್ಯಯನ ವಿದೇಶ ಪ್ರವಾಸಕ್ಕೆ ಬ್ರೇಕ್: ಕೋಳಿವಾಡ

ಶಾಸಕರ ಅಧ್ಯಯನ ವಿದೇಶ ಪ್ರವಾಸಕ್ಕೆ ಬ್ರೇಕ್: ಕೋಳಿವಾಡ
ಬೆಂಗಳೂರು , ಗುರುವಾರ, 4 ಮೇ 2017 (20:35 IST)
ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದ ಶಾಸಕರ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ್ ಹೇಳಿದ್ದಾರೆ.
 
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
 
ಇಂದು ನಡೆದ ಶಾಸಕರ ಸಭೆಯಲ್ಲಿ ವಿದೇಶ ಪ್ರವಾಸ ಮುಂದೂಡಲು ತೀರ್ಮಾನಿಸಲಾಯಿತು. ಜೂನ್ ನಂತರ ಶಾಸಕರು ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ಶಾಸಕರ ವಿದೇಶ ಪ್ರವಾಸ ಕುರಿತಂತೆ ಬರಗಾಲ ಪೀಡಿತ ಜನತೆ ಮತ್ತು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿರುವುದು ಶಾಸಕರ ವಿದೇಶ ಪ್ರವಾಸ ಬ್ರೇಕ್‌ಗೆ ಕಾರಣವಾಗಿದೆ ಎನ್ನಲಾಗುತ್ತಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್‌ನೊಂದಿಗೆ ಯಾವುದೇ ಮೈತ್ರಿಯಿಲ್ಲ: ಸಿಎಂ ಸ್ಪಷ್ಟನೆ