ಬೆಂಗಳೂರು : ಕೊರೊನಾ ತಡೆಗೆ ಶಾಸಕರಿಂದ ಹೋಮ ಹವನ ಕಾರ್ಯ ನಡೆಸಲಾಗಿದೆ. ಶಾಸಕ ಅಭಯ್ ಪಾಟೀಲ್ ಅವರು ಹೋಮದ ಮೊರೆ ಹೋಗಿದ್ದಾರೆ.
ಹಾಗಾಗಿ ಬೆಳಗಾವಿ ಕ್ಷೇತ್ರದಲ್ಲಿ ಹೋಮ ಹವನ ನಡೆಸಲಾಗಿದೆ. ಹೋಮದಿಂದ ಸೋಂಕು ನಿವಾರಣೆಯಾಗುವ ನಂಬಿಕೆಯಿಂದ ಮನೆಯ ಮುಂದೆ ಅಗ್ನಿಕುಂಡ ನಿರ್ಮಿಸಿ ಹೋಮ ಹವನ ನಡೆಸಿದ್ದಾರೆ.
ಒಂದೇ ದಿನ 50 ಕಡೆಗಳಲ್ಲಿ ಹೋಮ ಹವನ ಕಾರ್ಯ ನಡೆಸಲಾಗಿದ್ದು, ಜೂನ್ 15ರವರೆಗೆ ದಕ್ಷಿಣ ಕ್ಷೇತ್ರದ ಎಲ್ಲ ಕಡೆ ಹೋಮ ಮಾಡಲಾಗುವುದು ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.