Webdunia - Bharat's app for daily news and videos

Install App

ಬಾರದ ಶಾಸಕ; ಕಚೇರಿ ಖಾಲಿ ಖಾಲಿ!

Webdunia
ಗುರುವಾರ, 21 ಫೆಬ್ರವರಿ 2019 (15:16 IST)
ವಿಧಾನ ಸಭೆ ಚುನಾವಣೆ ಮುಗಿದು ತಿಂಗಳುಗಳೇ ಕಳೆಯುತ್ತಿವೆ. ಆದರೆ ಈವರೆಗೂ ಆ ಕ್ಷೇತ್ರದ ಶಾಸಕರ ಕಚೇರಿ ಖಾಲಿ ಖಾಲಿಯಾಗಿಯೇ ಇದೆ.

ಶಾಸಕ ವಿ. ಮುನಿಯಪ್ಪರ ಕಛೇರಿ ಖಾಲಿ ಖಾಲಿಯಾಗಿದೆ. ಚುನಾವಣೆ ಮುಗಿದು ಒಂದು ವರ್ಷದ‌ ಆಸು ಪಾಸಿನಲ್ಲಿದೆ. ‌
ಒಮ್ಮೆಯಾದರೂ ಕಛೇರಿಗೆ ಆಗಮಿಸದ ಶಾಸಕ ವಿ. ಮುನಿಯಪ್ಪರ ಕ್ರಮ ಈಗ ಚರ್ಚೆಗೆ ಕಾರಣವಾಗುತ್ತಿದೆ.  ಶಿಡ್ಲಘಟ್ಟ ವಿಧಾನ ಕ್ಷೇತ್ರದ  ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪರ ಕಛೇರಿ ತುಂಬೆಲ್ಲಾ ಧೂಳುಮಯವಾಗಿದೆ.

ಹಳೆ ಖಾಲಿ ವಾಟರ್ ಬಾಟಲಿಗಳಿಂದ ಗಬ್ಬುನಾರುತ್ತಿರುವ ಶಾಸಕರ ಕಛೇರಿ ಈಗ ಚರ್ಚೆಗೆ ಗ್ರಾಸವೊದಗಿಸಿದೆ.
ಚಿಂತಾಮಣಿ ತಾಲ್ಲೂಕು ಕಛೇರಿ ಆವರಣದಲ್ಲಿರುವ ಶಾಸಕರ ಕಛೇರಿಗೆ ಶಾಸಕರೇ ಭೇಟಿ ನೀಡದಿರುವುದರಿಂದಾಗಿ,
ಚಿಲಕನೇರ್ಪು ಹೋಬಳಿಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವಲ್ಲಿ ಶಾಸಕ ವಿಫಲರಾಗಿದ್ದಾರೆ ಎಂದು ಜನರು ದೂರಿದ್ದಾರೆ.

ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಛೇರಿಗೆ ಆಗಮಿಸಿದ್ದರು. ಚುನಾವಣೆ ಮುಗಿದ ನಂತರ ಜನಸಾಮಾನ್ಯರ ಕೈಗೆ  ಶಾಸಕ ವಿ. ಮುನಿಯಪ್ಪ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನರು ದೂರುತ್ತಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments