ವಿದ್ಯಾರ್ಥಿನಿಯರು ನಾಪತ್ತೆ

Webdunia
ಗುರುವಾರ, 28 ಜುಲೈ 2022 (19:04 IST)
students
 ನಮ್ಮನ್ನ ಹುಡುಕಬೇಡಿ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆಯಾಗಿರುವ ಪ್ರಕರಣ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದೆ. ಹರ್ಷಿತಾ (19) ಹಾಗೂ ಮರಿಯಾ ವೈಶಾಲಿ (19) ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು.
 
ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಹರ್ಷಿತಾ ಜುಲೈ 25ರಂದು ಸಂಜೆ 5 ಗಂಟೆಗೆ ಸ್ನೇಹಿತೆ ಮರಿಯಾ ವೈಶಾಲಿಯನ್ನ ಭೇಟಿಯಾಗಲು ತೆರಳಿದ್ದವಳು ಮನೆಗೆ ಬರುವುದು ವಿಳಂಬವಾಗಿತ್ತು. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಹರ್ಷಿತಾ ಪೋಷಕರು ಮರಿಯಾ ವೈಶಾಲಿಗೆ ಕರೆ ಮಾಡಿ ವಿಚಾರಿಸಿದಾಗ ವಸಂತನಗರದಲ್ಲಿದ್ದೇವೆ ಸ್ವಲ್ಪ ಸಮಯದಲ್ಲಿ ಮನೆಗೆ ಬರುತ್ತಿದ್ದೇವೆ ಎಂದಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಮರಿಯಾಳ ಫೋನ್ ಸ್ವಿಚ್ ಆಫ್ ಆದಾಗ ಹರ್ಷಿತಾಳ ಪೋಷಕರು ಮರಿಯಾ ವೈಶಾಲಿಯ ಪೋಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಮರಿಯಾ 'ನಾವಿನ್ನು ಮನೆಗೆ ಬರಲ್ಲ ಇನ್ನು ಹುಡುಕಬೇಡಿ' ಎಂದು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಇಬ್ಬರ ಪೋಷಕರು ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರಿಂದ ಹುಡುಕಾಟ ಮುಂದುವರೆದಿದೆ‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಬಂಧಿ ಮೇಲೆ ನಿರಂತರ ರೇಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕ

ಬಿಗ್‌ಬಾಸ್ ಸೀಸನ್ 12, ಕ್ಷಮೆಯೊಂದಿಗೆ ಮುನಿಸಿಗೆ ಅಂತ್ಯ ಹಾಡಿದ ಗಿಲ್ಲಿ, ಅಶ್ವಿನಿ ಗೌಡ

ರಾಷ್ಟ್ರ ರಾಜಧಾನಿಯತ್ತ ಡಿಕೆ ಶಿವಕುಮಾರ್ ಪ್ರಯಾಣ, ಹಿಂದಿದೆ ಈ ಕಾರಣ

ಓಡಿಲ್ನಾಳ ಬಾಲಕ ಸಾವು ಪ್ರಕರಣ: ಹೊಸ ತಿರುವು ಪಡೆದ ತನಿಖೆ

ಬಿಜೆಪಿಗೆ ಮರಳುv ಬಗ್ಗೆ ಕೆಎಸ್ ಈಶ್ವರಪ್ಪ ಸ್ಫೋಟಕ ಮಾತು

ಮುಂದಿನ ಸುದ್ದಿ
Show comments