Select Your Language

Notifications

webdunia
webdunia
webdunia
webdunia

21 ವರ್ಷಗಳ ನಂತರ ಭಾರತಕ್ಕೆ ‘ವಿಶ್ವ ಸುಂದರಿ’ ಪಟ್ಟ: ಹರ್ನಾಜ್ ಸಂಧು ಮಿಸ್ ಯೂನಿವರ್ಸ್

21 ವರ್ಷಗಳ ನಂತರ ಭಾರತಕ್ಕೆ ‘ವಿಶ್ವ ಸುಂದರಿ’ ಪಟ್ಟ: ಹರ್ನಾಜ್ ಸಂಧು ಮಿಸ್ ಯೂನಿವರ್ಸ್
bangalore , ಸೋಮವಾರ, 13 ಡಿಸೆಂಬರ್ 2021 (20:02 IST)
21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದ್ದು, ಪಂಜಾಬ್ ಮೂಲದ ಹರ್ನಾಜ್ ಕೌರ್ ಸಂಧು 70 ನೇ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ದಲ್ಲಿ ಲಾರಾದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೇನ್ ಪ್ರಶಸ್ತಿ ಗೆದ್ದಿದ್ದರು.
ಇದಾದ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ಇದೀಗ ಒಲಿದುಬಂದಿದೆ.
ಇಸ್ರೇಲ್‌ನ ಐಲಾಟ್‌ನಲ್ಲಿ 70 ನೇ ವಿಶ್ವ ಸುಂದರಿ ಸ್ಪರ್ಧೆ ನಡೆದಿದ್ದು, ಭಾರತದಿಂದ 21 ವರ್ಷದ ಹರ್ನಾಜ್ ಪ್ರತಿನಿಧಿಸಿದ್ದರು.
ಹರ್ನಾಜ್ ಸಂಧು ಅವರಿಗೆ ಮೆಕ್ಸಿಕೋದ 2020 ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟ ತೊಡಿಸಿದ್ದಾರೆ. ಪರಾಗ್ವೆಯ ನಾಡಿಯಾ ಫೆರಾರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸಾವೆ ಅವರನ್ನು ಹರ್ನಾಜ್ ಹಿಂದಿಕ್ಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇಂದು 320 ಮಂದಿಗೆ ಕೊರೋನಾ ಸೋಂಕು, ಪಾಸಿಟಿವಿಟಿ ದರ 0.30%