ನದಿ ತೋರಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಆರೋಪಿಯನ್ನು ಆಶಿಕ್ ಎಂದು ಗುರುತಿಸಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು ಆಶಿಕ್ ತನ್ನ ಗೆಳೆಯನ ಜತೆಯಲ್ಲಿ ಬಾಲಕಿಯನ್ನು ಸ್ಕಾರ್ಪಿಯೋ ಕಾರ್ನಲ್ಲಿ ಚಿಕ್ಲಿ ಹೊಳೆ ಜಲಾಶಯಕ್ಕೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ.
ಜಲಾಶಯದ ಬಳಿ ಮಗುವಿನ ಮೇಲೆ ಅತ್ಯಾಚಾರವೆಸಗಿದ ಆತ ಬಳಿಕ ಆಕೆಯನ್ನು ಮಡಿಕೇರಿಗೆ ತಂದು ದೇವಾಲಯವೊಂದರ ಬಳಿ ಬಿಟ್ಟು ಹೋಗಿದ್ದ. ಆಕೆಯನ್ನು ಗಮನಿಸಿದ್ದ ಸ್ಥಳೀಯರು ವಿಳಾಸ ವಿಚಾರಿಸಿ ಮನೆಗೆ ಕರೆದೊಯ್ದು ಬಿಟ್ಟಿದ್ದರು.
ಮರುದಿನ ತನ್ನ ಪೋಷಕರ ಬಳಿ ಬಾಲಕಿ ನಡೆದ ವಿಚಾರವನ್ನು ತಿಳಿಸಿದ್ದು, ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಲಾಗಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ