Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಅಪಹರಿಸಿ ನೆರೆರಾಜ್ಯದಲ್ಲಿ ಕೂಡಿಟ್ಟು ಗ್ಯಾಂಗ್ ರೇಪ್ ನಡೆಸಿದ ಬಾಲಕರು

ಬಾಲಕಿಯನ್ನು ಅಪಹರಿಸಿ ನೆರೆರಾಜ್ಯದಲ್ಲಿ ಕೂಡಿಟ್ಟು ಗ್ಯಾಂಗ್ ರೇಪ್ ನಡೆಸಿದ ಬಾಲಕರು
ಬೆಂಗಳೂರು , ಶುಕ್ರವಾರ, 17 ಫೆಬ್ರವರಿ 2017 (08:00 IST)
15 ವರ್ಷದ ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಮಡಕಶಿರದ ಮನೆಯೊಂದರರಲ್ಲಿ ಕೂಡಿಟ್ಟು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 9 ರಂದು ಕೆಲಸಕ್ಕೆ ಹೋಗಿದ್ದ ಬಾಲಕಿ ಸಂಜೆ ಮನೆಗೆ ಹಿಂತಿರುಗಿರಲಿಲ್ಲ.ಆಕೆಗಾಗಿ  ಶೋಧ ನಡೆಸಿದ ಪೋಲಿಸರು ಕೊನೆಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯ ನಾಪತ್ತೆ ಹಿಂದೆ ಸ್ಥಳೀಯ ಹುಡುಗರ ಕೈವಾಡವಿರುವುದಾಗಿ ಆಕೆಯ ಪೋಷಕರು ಶಂಕೆ ವ್ಯಕ್ತ ಪಡಿಸಿದ್ದು ಕಾರ್ಯಾಚರಣಗಿಳಿದ ಪೊಲೀಸರು ಕೆಲ ಸಂಶಯಾಸ್ಪದ ಯುವಕರ ಮೊಬೈಲ್ ಸಂಖ್ಯೆ  ಪಡೆದು ತನಿಖೆ  ಪ್ರಾರಂಭಿಸಿದ್ದರು.
 
ಈ ಸಮಯದಲ್ಲಿ ಮೂವರು ಯುವಕರ ಮೊಬೈಲ್ ನೆಟವರ್ಕ್ ಆಂಧ್ರದ ಮಡಕಶಿರ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು. ತಕ್ಷಣ ಅಲ್ಲಿಗೆ ಧಾವಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.
 
ಬಾಲಕಿ ಹೇಳಿಕೆ ಆಧರಿಸಿ ಪೋಕ್ಸೋ, ಅತ್ಯಾಚಾರ, ಅಪಹರಣ ಆರೋಪದ ಮೇಲೆ ಬಂಧಿತ ಬಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್‌ನಲ್ಲಿ ಬಾಂಬ್ ಸ್ಪೋಟಕ್ಕೆ 100 ಬಲಿ