ಬೆಳಗಾವಿ : ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡಿದ ರೇಲಾ ಆಸ್ಪತ್ರೆಯ ವೈದ್ಯರಿಗೆ `ಧರ್ಮ’ದ ಹಣೆ ಪಟ್ಟಿಯನ್ನು ಕಟ್ಟಿ ವಿವಾದಕ್ಕೆ ಕಾರಣರಾಗಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.
ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ನೀಡಿರುವ ಈ ಹೇಳಿಕೆ ಇದೀಗ ಬಾರೀ ಚರ್ಚೆಗೆ ಕಾರಣವಾಗಿದ್ದು, ಸಿದ್ಧಗಂಗಾ ಶ್ರೀಗಳಿಗೆ ನಿಸ್ವಾರ್ಥವಾಗಿ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ ವೈದ್ಯರಿಗೆ `ಧರ್ಮ’ದ ಹಣೆ ಪಟ್ಟಿಯನ್ನು ಕಟ್ಟಿರುವುದು ಸರಿಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.