Select Your Language

Notifications

webdunia
webdunia
webdunia
webdunia

ಅರೆ ನಗ್ನ ಚಿತ್ರ ವೀಕ್ಷಣೆ: ಸಚಿವರಿಂದ ಟಿವಿ9 ವರದಿಗಾರ ಸಿದ್ದು ವಿರುದ್ಧ ಎಫ್‌ಐಆರ್ ದಾಖಲು

ಅರೆ ನಗ್ನ ಚಿತ್ರ ವೀಕ್ಷಣೆ: ಸಚಿವರಿಂದ ಟಿವಿ9 ವರದಿಗಾರ ಸಿದ್ದು ವಿರುದ್ಧ ಎಫ್‌ಐಆರ್ ದಾಖಲು
ರಾಯಚೂರು , ಶನಿವಾರ, 12 ನವೆಂಬರ್ 2016 (13:06 IST)
ಸಚಿವ ತನ್ವೀರ್ ಸೇಠ್‌ರಿಂದ ಅರೆನಗ್ನ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ0 ವರದಿಗಾರ ಸಿದ್ದು ಬಿರಾದಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
 
ಅರೆನಗ್ನ ಚಿತ್ರ ವೀಕ್ಷಣೆ ಮಾಡದಿದ್ದರೂ ಅವಹೇಳನಕಾರಿಯಾಗಿ ಬಿತ್ತರಿಸಲಾಗುತ್ತಿದೆ ಎಂದು ಸಚಿವ ತನ್ವೀರ್ ಸೇಠ್‌, ಟಿವಿ9 ವರದಿಗಾರ ಸಿದ್ದು ಬಿರಾದಾರ್ ಮತ್ತು ಕ್ಯಾಮರಾಮೆನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಟಿವಿ9 ವಿರುದ್ಧ ಉದ್ದೇಶಪೂರ್ವಕವಾಗಿ ವ್ಯಕ್ತಿಗೆ ಅಪಮಾನ ಮತ್ತು ಶಾಂತಿಭಂಗ ತಂದಿದ್ದಾರೆ ಎಂದು ಆರೋಪಿಸಿ ಸೆಕ್ಷನ್ 504ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
 
ಸಚಿವರು ತಾವು ಮಾಡಿದ ಕೃತ್ಯ ಬಹಿರಂಗವಾಗಿರುವುದನ್ನು ಸಹಿಸದೆ ಟಿವಿ9 ವರದಿಗಾರನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಟಿವಿ9 ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಸೆಕೆಂಡ್‌ನಲ್ಲಿ ಏನು ನೋಡಲು ಸಾಧ್ಯ: ತನ್ವೀರ್ ಸೇಠ್