Select Your Language

Notifications

webdunia
webdunia
webdunia
webdunia

ಮೂರು ಸೆಕೆಂಡ್‌ನಲ್ಲಿ ಏನು ನೋಡಲು ಸಾಧ್ಯ: ತನ್ವೀರ್ ಸೇಠ್

ಮೂರು ಸೆಕೆಂಡ್‌ನಲ್ಲಿ ಏನು ನೋಡಲು ಸಾಧ್ಯ: ತನ್ವೀರ್ ಸೇಠ್
ಬೆಂಗಳೂರು , ಶನಿವಾರ, 12 ನವೆಂಬರ್ 2016 (12:57 IST)
ಮೂರು ಸೆಕೆಂಡ್‌ನಲ್ಲಿ ಏನು ನೋಡಲು ಸಾಧ್ಯ, ನಾನು ತಪ್ಪು ಮಾಡಿಲ್ಲ, ಹೀಗಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪಿಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟ ಪಡಿಸಿದ್ದಾರೆ.
 
ನಗರದ ಶಾಸಕರ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನ್ನಾಡುತ್ತಿದ್ದ ಅವರು, ನಾನು ಉದ್ದೇಶಪೂರ್ವಕವಾಗಿ ಅರೆನಗ್ನ ಚಿತ್ರ ವೀಕ್ಷಿಸಿಲ್ಲ. ನಾನೇನು ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯನವರಿಗೆ ವಿವರಿಸಿದ್ದೇನೆ. ಸಂಪೂರ್ಣ ಕಾರ್ಯಕ್ರಮದ ವಿಡಿಯೋ ಮತ್ತು ಖಾಸಗಿ ವಾಹಿನಿ ವಿಡಿಯೋವನ್ನು ಸಂಗ್ರಹಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ. 
 
ಕಾರ್ಯಕ್ರಮದ ಫೋಟೋ ನೋಡುತ್ತಿದ್ದಾಗ ಅಚಾನಕ್ ಆಗಿ ಅದು ಓಪನ್ ಆಗಿದೆ. ರಾಜ್ಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದೆ ಎಂದು ತಿಳಿಯಲು ವಾಟ್ಸ್ಅಪ್ ವೀಕ್ಷಣೆ ಮಾಡುತ್ತಿದೆ. ಈ ವೇಳೆ ಏಕಾಏಕಿ ಈ ಚಿತ್ರಗಳು ಬಂದಿವೆ ಎಂದು ತಮ್ಮದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 
 
ತಪ್ಪು ಮಾಡದೆ ಒಪ್ಪಿಕೊಂಡರೆ ನನಗದು ಅವಮಾನ. ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸೇಠ್ ಹೇಳಿದ್ದಾರೆ.
 
ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಮತ್ತೀಗ ಇದು ಪಿತೂರಿ, ನಮ್ಮ ಸಚಿವರದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. 
  
ಏತನ್ಮಧ್ಯೆ ತಾವು ಅಶ್ಲೀಲ ಚಿತ್ರ ನೋಡುತ್ತಿದ್ದ ಸುದ್ದಿ ಬಿತ್ತರಿಸಿದ್ದ ಖಾಸಗಿ ಸುದ್ದಿ ವಾಹಿನಿ ವಿರುದ್ಧ ಸೇಠ್ ದೂರು ದಾಖಲಿಸಿದ್ದಾರೆ.  ಐಪಿಸಿ ವಿಭಾಗ 504ರ ಅಡಿ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.  ಕ್ಯಾಮರಾಮ್ಯಾನ್ ಮತ್ತು ವರದಿಗರಾರರ ವಿರುದ್ಧ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೆ ಅಪಮಾನ ಮಾಡುವ ರೀತಿಯಲ್ಲಿ ಸುದ್ದಿ ಬಿತ್ತರಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿಗುಡಿ ದುರಂತ: ಶರಣಾದ ನಾಗಶೇಖರ್, ರವಿ ವರ್ಮಾ