Select Your Language

Notifications

webdunia
webdunia
webdunia
webdunia

ಪೇಜಾವರ ಶ್ರೀ ಹೇಳಿಕೆಗೆ ಎಂ.ಬಿ. ಪಾಟೀಲ್ ತಿರುಗೇಟು

ಪೇಜಾವರ ಶ್ರೀ ಹೇಳಿಕೆಗೆ ಎಂ.ಬಿ. ಪಾಟೀಲ್ ತಿರುಗೇಟು
ಬೆಂಗಳೂರು , ಮಂಗಳವಾರ, 25 ಜುಲೈ 2017 (15:33 IST)
ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯವಿಲ್ಲ ಎಂಬ ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರಭಾವಿ ಲಿಂಗಾಯತ ಮುಖಂಡ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಆರೆಸ್ಸೆಸ್ ಬೆಂಬಲಿಸುವಂತಹ ಒಂದು ಸಿದ್ಧಾಂತದ ಕಪಿಮುಷ್ಠಿಯಲ್ಲಿರುವ ಪೇಜಾವರ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಲಿಂಗಾಯತ ಧರ್ಮ ಜಾತ್ಯಾತೀತವಾದದ್ದು, ನಮ್ಮ ಧರ್ಮದ ಮುಖಂಡರು ಮತ್ತು ಸ್ವಾಮೀಜಿಗಳು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂಬಿ ಪಾಟೀಲ್ ಹೇಳಿದ್ದಾರೆ.

ಇದೇವೇಳೆ, ನಮ್ಮ ಸಮುದಾಯದವರೇ ಆದ ಯಡಿಯೂರಪ್ಪ ಆರೆಸ್ಸೆಸ್ ಮಾತು ಕೇಳಿ ಏನೇನೋ ಮಾತನಾಡುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯನವರು ಎಂದು ಸಮುದಾಯವನ್ನ ಒಡೆಯುವ ಪ್ರಯತ್ನ ಮಾಡಿಲ್ಲ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವೆಲ್ಲರೂ ಒಂದಾಗಿ ಉತ್ತರ ಕೊಡಬೇಕು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ತಿಂಗಳು ಬರಲಿದೆ ಹೊಸ ನೋಟು.. ಯಾವುದು ಗೊತ್ತಾ..?