ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದ ವಿಚಾರಕ್ಕೆ ಸಂಬಂದಿಸಿದಂತೆ ಸಚಿವ ಕಾಗೋಡು ತಿಮ್ಮಪ್ಪ ಉಡಾಫೆ ಉತ್ತರ ನೀಡಿದ್ದಾರೆ.
ಸಮಾಜ ದೊಡ್ಡದಿದೆ, ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ. ಬೇರೆ ಸುದ್ದಿ ಹೈಲೇಟ್ಸ್ ಮಾಡ್ರೀ, ನಡೆದುಕೊಂಡು ಹೋಗುವಾಗ ಅಪಘಾತವಾದರೆ ಏನ್ ಮಾಡೋಕ್ಕಾಗುತ್ತೆ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಕೊಳವೆಬಾವಿ ದುರಂತವನ್ನ ಅಪಘಾತಕ್ಕೆ ಹೋಲಿಸಿದ್ದಾರೆ.
ಬೋರ್ ವೆಲ್ ದುರಂತ ತಡೆಯುವ ಕುರಿತಂತೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹಿರಿಯ ಸಚಿವರಾದ ಕಾಗೋಡು ಅವರಿಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಈ ಉತ್ತರ ಬಂದಿದೆ. ಸಚಿವರ ಈ ಉಡಾಫೆ ಹೋಲಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ