Select Your Language

Notifications

webdunia
webdunia
webdunia
webdunia

ಗಾಂಧೀಜಿ ಚರಕದೊಂದಿಗೆ ಮೋದಿ ಪೋಸ್ ಕೊಟ್ಟಿರುವುದು ಸರಿಯಲ್ಲ: ಎಚ್‌.ಕೆ.ಪಾಟೀಲ್

ಗಾಂಧೀಜಿ ಚರಕದೊಂದಿಗೆ ಮೋದಿ ಪೋಸ್ ಕೊಟ್ಟಿರುವುದು ಸರಿಯಲ್ಲ: ಎಚ್‌.ಕೆ.ಪಾಟೀಲ್
ಬಾಗಲಕೋಟೆ , ಶುಕ್ರವಾರ, 13 ಜನವರಿ 2017 (17:17 IST)
ಮಹಾತ್ಮ ಗಾಂಧೀಜಿ ಅವರ ಪರಮ ಅಸ್ತ್ರವಾಗಿರುವ ಚರಕವನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿ ಪೋಸ್ ಕೊಟ್ಟಿರುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂಸಾತ್ಮಕ ಮಾರ್ಗ ವಿರೋಧಿಸುವ ದೊಡ್ಡ ಶಕ್ತಿಯೇ ಇದೆ. ಇಂತಹ ಶಕ್ತಿಯನ್ನು ಬಿಜೆಪಿಯವರು ಮೊದಲು ಹೊರ ಹಾಕಬೇಕು ಎಂದು ಕಿಡಿಕಾರಿದರು. 
 
ಚರಕ ಮಹಾತ್ಮ ಗಾಂಧೀಜಿ ಅವರ ಪರಮ ಅಸ್ತ್ರ. ಮಹಾತ್ಮರ ಅಸ್ತ್ರವನ್ನು ಬಳಸಿಕೊಂಡು ಖಾದಿ ಗ್ರಾಮೋದ್ಯೋಗ ಕ್ಯಾಲೆಂಡರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಸ್ ನೀಡಿರುವುದು ಸರಿಯಲ್ಲ ಎಂದರು. 
 
ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಸ್‌ ಬ್ಯಾಂಕ್‌ನ‌ಲ್ಲಿರುವ ಕಪ್ಪು ಹಣ ತರಲು ಮೋದಿಗೆ ಧೈರ್ಯ ಇಲ್ಲ: ಖರ್ಗೆ