Publish Date: Fri, 07 May 2021 (12:19 IST)
Updated Date: Fri, 07 May 2021 (12:21 IST)
ಬೆಂಗಳೂರು : ಪದೇ ಪದೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ವಿರುದ್ಧ ಸಚಿವ ಭೈರತಿ ಬಸವರಾಜ್ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಮನೆಯಲ್ಲಿ ಕುಳಿತು ಹೇಳುವುದಲ್ಲ. ಜನರ ಬಳಿ ಬಂದು ಕೆಲಸ ಮಾಡಿ ಕಷ್ಟ ಗೊತ್ತಾಗುತ್ತದೆ ಎಂದಿ ವಾಗ್ದಾಳಿ ನಡೆಸಿದ್ದಾರೆ.
ಸುಮ್ಮನೆ ಸರ್ಕಾರದ ವಿರುದ್ಧ ಆರೋಪಿಸುವುದನ್ನು ಬಿಡಿ, ನಿಮಗೆ ಬೇರೆ ಏನೂ ಕೆಲಸ ಇಲ್ಲ. ಮನೆಯಲ್ಲಿ ಕುಳಿತು ಫೋನ್ ನಲ್ಲಿ ಹೇಳಿದ್ರೆ ಏನೂ ಆಗಲ್ಲ.