Select Your Language

Notifications

webdunia
webdunia
webdunia
webdunia

ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ದಾಖಲು

ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ದಾಖಲು
bangalore , ಮಂಗಳವಾರ, 2 ನವೆಂಬರ್ 2021 (20:18 IST)
ರಾಷ್ಟ್ರ ರಾಜಧಾನಿಯಲ್ಲಿ ಪ್ರಸಕ್ತ ವರ್ಷದ ಕನಿಷ್ಠ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್ ಸೋಮವಾರ ರಾತ್ರಿ ದಾಖಲಾಗಿದೆ. ಆದಾಗ್ಯೂ ಪೂರ್ವಾಭಿಮುಖ ಗಾಳಿಯಿಂದಾಗಿ ಸೋಮವಾರ ತಾಪಮಾನ ಅಲ್ಪ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದಕ್ಕೂ ಮುನ್ನ ಅಕ್ಟೋಬರ್ 29ರಂದು ಪ್ರಸಕ್ತ ಋತುವಿನ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಸದರ್‌ಜಂಗ್‌ನಲ್ಲಿ ದಾಖಲಾಗಿದೆ. ಆದರೆ ಕನಿಷ್ಠ ತಾಪಮಾನ 13. 6 ಡಿಗ್ರಿ ಸಫ್ದರ್‌ಜಂಗ್‌ನಲ್ಲಿ ದಾಖಲಾಗಿದೆ. ಇದೇ ರೀತಿಯ ಗರಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ವಾಡಿಕೆಗಿಂತ ಒಂದು ಡಿಗ್ರಿ ಅಧಿಕ.
"ಶುಭ್ರ ಆಕಾಶ ಮತ್ತು ಮಾಲಿನ್ಯ ಅಲ್ಪಮಟ್ಟಿಗೆ ಕಡಿಮೆಯಾಗಿರುವ ಮತ್ತು ಸ್ಥಳೀಯ ವಿಕಿರಣಶೀಲ ಶೀತದ ಕಾರಣದಿಂದ ಸೋಮವಾರ ಸಫ್ದರ್‌ಜಂಗ್‌ನಲ್ಲಿ 13.6 ಡಿಗ್ರಿ ಕನಿಷ್ಠ ತಾಪಮಾನವಿದೆ. ಗಾಳಿಯ ಪೂರ್ವಾಭಿಮುಖವಾಗಿ ಬದಲಾಗಿದೆ, ಕನಿಷ್ಠ ತಾಪಮಾನ ಮಂಗಳವಾರ ಅಲ್ಪಮಟ್ಟಿಗೆ ಹೆಚ್ಚಾಗುತ್ತದೆ" ಎಂದು ಹವಾಮಾನ ಇಲಾಖೆ ಆರ್.ಕೆ.ಜೆನಮಣಿ ಹೇಳಿದ್ದಾರೆ.
ಐಎಂಡಿ ಮುನ್ಸೂಚನೆ ಪ್ರಕಾರ ಮಂಗಳವಾರ ಹಾಗೂ ಬುಧವಾರ ಕನಿಷ್ಠ ತಾಪಮಾನ 15 ಡಿಗ್ರಿ ಆಸುಪಾಸಿನಲ್ಲಿ ಇರಲಿದೆ. ಗುರುವಾರ ಅಲ್ಪ ಇಳಿಕೆಯಾಗುವ ನಿರೀಕ್ಷೆ ಇದೆ. "ಪಶ್ಚಿಮ ಪ್ರಕ್ಷುಬ್ಧತೆ ನವೆಂಬರ್ 1 ರಿಂದ 4 ರವರೆಗೆ ಪರಿಣಾಮ ಬೀರಲಿದೆ. ದಿಲ್ಲಿಯಲ್ಲಿ ಗಾಳಿಯ ದಿಕ್ಕು ಬದಲಾಗಿದ್ದು, ಬೆಟ್ಟ ಪ್ರದೇಶಗಳಲ್ಲಿ ಅಲ್ಪಾವಧಿಯ ನಿರೀಕ್ಷೆಯಿದೆ. ಆದಾಗ್ಯೂ ತಾಪಮಾನ ಕಡಿಮೆಯಾಗುವ ಸಾಧ್ಯತೆಯಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗಾಳಿಯ ದಿಕ್ಕು ಪೂರ್ವದಿಂದ ವಾಯವ್ಯಕ್ಕೆ ಬದಲಾಗುವ ಕಾರಣದಿಂದ ನವೆಂಬರ್ 5 ಮತ್ತು 6 ರಂದು ಮತ್ತೆ ತಾಪಮಾನ 13 ಡಿಗ್ರಿಗಳಷ್ಟು ಕುಸಿಯುವ ಅಪಾಯವಿದೆ ಎಂದು ವಿವರಿಸಲಾಗಿದೆ. 2020ರ ನವೆಂಬರ್‌ನಲ್ಲಿ ಕನಿಷ್ಠ ತಾಪಮಾನ 6.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬಕ್ಕೆ ಆಭರಣ ಕೊಳ್ಳುವುದಾದರೆ ಚಿನ್ನ, ಬೆಳ್ಳಿ ದರ ವಿವರ ಪರಿಶೀಲಿಸಿ