ರಾಜ್ಯದಲ್ಲಿ ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದು ಮುಸ್ಲಿಂರ ನಡುವೆ ಸಾಮರಸ್ಯ ಕದಡುವ ವಿವಾದಗಳು ಹುಟ್ಟಿಕೊಳ್ಳುತ್ತಿವೆ.ಮೊದಲು ರಾಜ್ಯದಲ್ಲಿ ಇಜಾಬ್ ವಿಷಯ ಜೋರಾಗಿತ್ತು.ನಂತರ ಹಲಾಲ ಕಟ್, ಜಟ್ಕಾ ಕಟ್ ಸದ್ದು ಮಾಡಿದ್ದವು.ನಂತರ ಸೇಂದಿ ವಿವಾದ ಕೂಡ ರಾಜ್ಯದಲ್ಲಿ ಜೋರಾಗಿದೆ. ಈಗ ರಾಜ್ಯದಲ್ಲಿ ಮತ್ತೊಂದು ವಿವಾದ ಪ್ರಾರಂಭವಾಗಿದ್ದು.ರಾಜ್ಯದ ಮಸೀದಿಗಳಲ್ಲಿನ ಮೈಕ್ ಗಳ ವಿವಾದ.ಮಹಾರಾಷ್ಟ್ರದಲ್ಲಿ ಈಗ ಮಸೀದಿಗಳಿಗೆ ಅಳವಡಿಸಿರುವ ಮೈಕ್ ಗಳನ್ನು ನಿಷೇಧಿಸುವಂತೆ ಅಲ್ಲಿನ ಸರ್ಕಾರಕ್ಕೆ ಎಮ್ ಎನ್ ಎಸ್ ಪಕ್ಷದ ಮುಖಂಡ ರಾಜ್ ಠಾಕ್ರೆ ಒತ್ತಾಯ ಮಾಡಿದ್ದಾರೆ. ಅದು ರಾಜ್ಯಕ್ಕೂ ವ್ಯಾಪಿಸಿದ್ದು,ರಾಜ್ಯಾದಲ್ಲೂ ಮಸೀದಿಗಳ ಮೇಲಿನ ಮೈಕ್ ಗಳನ್ನು ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.ಅದರಲ್ಲೂ ಕಲಬುರ್ಗಿಯಲ್ಲಿ ಈ ವಿವಾದ ಪ್ರಾರಂಭವಾಗಿದೆ. ಮಸೀದಿಯಲ್ಲಿನ ಮೈಕ್ ಗಳಿಂದ ಜನರಿಗೆ ಕಿರಿಕಿರಿ ಆಗುತ್ತಿದೆ.ರಂಜಾನ್ ನಿಮಿತಚತ ದುನದ ಹಲವು ಬಾರಿ ಧ್ವನಿವರ್ಧಕ ಜೊತೆಗೆ ಸೈರನ್ ಕೂಡ ಹಾಕುತ್ತಾರೆ.ಇದರಿಂದ ಮಕ್ಕಳಿಗೆ ಓದುಗರಿಗೆ,ವಯಸ್ಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧ ಮಾಡುವಂತೆ ಆಗ್ರಹ ಮಾಡಲಾಗುತ್ತಿದೆ
.ಇನ್ನೂ,ಮಸೀದಿಗಳ ಮೇಲಿನ ಮೈಕ್ ತೆರವು ವಿಷಯಕ್ಕೆ ಸಂಭವಿಸಿದಂತೆ ಹಲವು ಮುಸ್ಲಿಂ ಮುಖಂಡರು ಖಂಡನೆ ಮಾಡಿದ್ದಾರೆ.ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲಿ ವಿಫವಾಗ್ತಿದೆ.ಜನರ ಮಧ್ಯೆ ಜಗಳ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ.ಹಿಜಾಬ್ ಆಯಿತು,ಹಲಾಲ ಆಯಿತು ಇದೀಗ ಮಸೀದಿಗಳ ಮೇಲೆ ಕಣ್ಣು ಬಿದ್ದಿದೆ.ಚುನಾವಣೆ ಹತ್ತಿರ ಬಂತು ಬಿಜೆಪಿಯವರು ಒಂದಿಲ್ಲವೊಂದು ವಿವಾದ ಹುಟ್ಟು ಹಾಕುತ್ತಾರೆ.ಮಸೀದಿಗಳ ಮೇಲೆ ಮೈಕ್ ನಿನ್ನೆ ಮೊನ್ನೆಯದಲ್ಲ.ಆದರೂ ಏಕಾಏಕಿ ವಿವಾದ ಯಾಕೆ ಬಂದಿದೆ?.ಅಜಾ ಹೇಳಿದ ಮೇಲೆಯೇ ಜನರು ಎಚ್ಚರವಾಗ್ತಾರೆ.ರಂಜಾನ್ ಸಂದರ್ಭದಲ್ಲಿ ಸೈರನ್ ಕೊಡೊದು ಧಾರ್ಮಿಕ ಆಚರಣೆಗಳಲ್ಲಿ ಒಂದು.ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡತಿನಿವಿ.ಆದರೆ ಪೂರ್ಣ ಪ್ರಮಾಣದಲ್ಲಿ ಅಜಾ ನಿಲ್ಲಿಸಲು ಆಗಲ್ಲ.ಆದರೆ ಧಾರ್ಮಿಕ ಭಾವನೆಗಳಿಗೆ ಮನ್ನಣೆ ನೀಡಿ ಮೈಕ್ ಸೌಂಡ್ ಕಡಿಮೆ ಇಟ್ಟು ಅಜಾ ಕೊಡಲು ಅನುವು ಮಾಡಿಕೊಡಬೇಕು.
ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತೆವೆ.ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ವಿಷಯಗಳು ಇಲ್ಲ ಆಗಾಗಿ ಈ ರೀತಿಯ ವಿವಾದಗಳನ್ನು ಹುಟ್ಟುಹಾಕುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.