Publish Date: Sat, 01 Jul 2023 (15:00 IST)
Updated Date: Sat, 01 Jul 2023 (15:33 IST)
ಜುಲೈ 2 ರಂದು ನೇರಳೆ ಮಾರ್ಗದ ಮೆಟ್ರೋ ಸಂವಾರ ಸ್ಥಗಿತವಾಗಲಿದೆ.ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ಮಧ್ಯದ ನೇರಳ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯ ಇರುವುದರಿಂದ ಭಾನುವಾರ ಬೆಳಗ್ಗೆ 07 ಗಂಟೆಯಿಂದ 09 ಗಂಟೆಯವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ.ಈ ಅವಧಿಯಲ್ಲಿ ಮಹಾತ್ಮ ಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ಮಟ್ರೋ ನಿಲ್ದಾಣವರೆಗೆ ಮೆಟ್ರೋ ಬಂದ್ ಆಗಲಿದೆ. ಕೆಂಗೇರಿ ಮತ್ತು ಎಂಜಿ ರಸ್ತೆ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್ ಫಿಲ್ಡ್ (ಕಾಡುಗೋಡಿ) ಮಾತ್ರ ಮೆಟ್ರೋ ಸಂಚಾರ ಇರಲಿದೆ.ಈ ಬಗ್ಗೆ BMRCL ಪ್ರಕಟಣೆ ಹೊರಡಿಸಿದೆ.