Publish Date: Thu, 04 Jan 2024 (14:00 IST)
Updated Date: Thu, 04 Jan 2024 (13:16 IST)
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಜನವರಿ 10ರವರೆಗೆ ತುಂತುರು ಮಳೆಯಾಗಲಿದೆ.ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಇದರ ಪರಿಣಾಮ ಜನವರಿ 10ರವರೆಗೆ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿ ಭಾಗದಲ್ಲಿ ಜನವರಿ 10ರವರೆಗೆ ಬಹುತೇಕ ಕಡೆ ಮೋಡ ಕವಿದ,ತುಂತುರು ಮಳೆ ಆಗಲಿದೆ.ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜನವರಿ 8 ರಿಂದ ಮೋಡ ಕವಿದ ವಾತಾವರಣ, ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.