Select Your Language

Notifications

webdunia
webdunia
webdunia
webdunia

ಮೇಕೆದಾಟು ಪಾದಯಾತ್ರೆ ಪ್ರಾರಂಭ

ಮೇಕೆದಾಟು ಪಾದಯಾತ್ರೆ ಪ್ರಾರಂಭ
ಬೆಂಗಳೂರು , ಸೋಮವಾರ, 28 ಫೆಬ್ರವರಿ 2022 (16:47 IST)
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ನಮ್ಮ ಬೆಂಬಲವಿದೆ ಎಂದು ಮುರುಘಾ ಶರಣರು ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹತ್ತು ಹಲವು ನೀರಾವರಿ ಹೋರಾಟ ನಡೆದಿವೆ. ನೀರು ನಮ್ಮೆಲ್ಲರ ಹಕ್ಕು. ಡಿಕೆಶಿ ನೇತೃತ್ವದಲ್ಲಿ ಮೇಕೆದಾಟು ಹೋರಾಟ ನಡೆಯುತ್ತಿದೆ
ಹೋರಾಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಸ್ವಾಮೀಜಿ ಕೆಲಸ ಅಂದ್ರೆ ಸಾಮಾಜಿಕ ನ್ಯಾಯ ಒದಗಿಸುವುದು. ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಹೀಗಾಗಿ ಈ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ಈ ಹಿಂದೆ ನಾವು ಹೋರಾಟಗಳಿಗೆ ಬೆಂಬಲ ನೀಡಿದ್ದೇವೆ. ಭದ್ರಾ ಮೇಲ್ದಂಡೆ ಹೋರಾಟ ಮಾಡಿದ್ದೇವೆ. ಈಗ ಉರಿ ಬಿಸಿಲಿನಲ್ಲಿ ಹೋರಾಟ ಮಾಡ್ತಿದ್ದಾರೆ. ಎಸಿ ರೂಮಿನಲ್ಲಿ ಕೂರಲು ಅವಕಾಶವಿದೆ. ಆದ್ರೆ, ಹೋರಾಟ ಮಾಡುತ್ತಿದ್ದಾರೆ. ಇದು ರಾಜ್ಯದಲ್ಲಿ ಸಂಚಲನ ಮೂಡಿಸಿದ ಹೋರಾಟ ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ನಕಲಿ ಬಿಲ್ ಎ. ಸಿ. ಬಿ. ಶಾಕ್