Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಅಧಿಕಾರಿಗಳ ಜೊತೆ ಮೂರುವರೆ ಗಂಟೆಗಳ ಕಾಲ ಮಿಟೀಂಗ್..!

ಬಿಬಿಎಂಪಿ ಅಧಿಕಾರಿಗಳ ಜೊತೆ ಮೂರುವರೆ ಗಂಟೆಗಳ ಕಾಲ ಮಿಟೀಂಗ್..!
bangalore , ಸೋಮವಾರ, 29 ಮೇ 2023 (21:11 IST)
ಇಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಬಿಬಿಎಂಪಿಗೆ ಭೇಟಿ ನೀಡಿದ್ರು ಸುಮಾರು ಮೂರು ಗಂಟೆಗಳ ಕಾಲ ಬಿಬಿಎಂಪಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು . ವೀಕ್ಷಕರೇ ಉಪಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಬಿಬಿಎಂಪಿ ಕಚೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸುಮಾರು ಮೂರುವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ರು, ಕೆಲ ಅಧಿಕಾರಿಗಳ ಬಳಿ ಬಿಬಿಎಂಪಿಗೆ ಸಂಬಧಿಸಿದ ಕಾಮಗಾರಿಗಳ ಬಗ್ಗೆ ದಾಖಲೆಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ, ಇನ್ನೂ ಬಿಬಿಎಂಪಿ ಇನ್ನೂ ಭ್ರಷ್ಟಾಚಾರ ರಹಿತ ಕಾರ್ಪೋರೇಷನ್ ಆಗಬೇಕು ಎಂದು ಖಡಕ್ ಆಗಿಯೇ ಹೇಳಿದ್ದಾರೆ, ಬೆಚ್ಚಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಕೆಲ ಅಧಿಕಾರಿಗಳಿಗೆ ಇಂದು ಬೆಂಗಳೂರು ಉಸ್ತುವಾರಿ ಸಚಿವರು ಬೆಂಡೆತ್ತಿದ್ದಾರೆ, 

ಈಗಾಗಲೇ ನಡೆಯುತ್ತಿರೋ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇನ್ನೂ ಬಿಬಿಎಂಪಿಗೆ ಬರೋ ಸಾರ್ಜಜನಿಕರ ಬಳಿ ಸೌಜನ್ಯವಾಗಿ ವರ್ತಿಸುವಂತೆ ಹಾಗೂ ಅವರ ಕೆಲಸಗಳು ತ್ವರಿತಗತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರೋ ಪ್ರದೇಶ ನಮ್ಮ ಬೆಂಗಳೂರಿನ ಮೂಲಕ ಜನರು ಭಾರತವನ್ನು ನೋಡುತ್ತಿದ್ದಾರೆ. ಬೆಂಗಳೂರಿಗೆ ಅನೇಕ ಹಿರಿಯರ ಕೊಡುಗೆ ಇದೆ. ಕೆಂಪೆಗೌಡರು ಈ ನಗರಕ್ಕೆ ಫೌಂಡೇಷನ್ ಹಾಕಿದ್ರು ಹಾಗೂ ಕೆಂಗಲ್ ಹನುಮಂತಯ್ಯರವರ ತನ್ನದೇ ಆದಂತಹ ಕೊಡುಗೆ ಇದೆ, ಇದನೆಲ್ಲಾ ಉಳಿಸಿಕೊಳ್ಳಬೇಕು ಎಂದರು.

ಸಲಹೆ, ಸೂಚನೆಗಳು 
 
೧. ಕಾಮಗಾರಿಗಳ ವಿವರಗಳು ದಾಖಲೆ ಸಮೇತ ನೋಡಬೇಕು..
೨- ಬಿಬಿಎಂಪಿ ಅನುದಾನ ಪಡೆದು ಶುರುಮಾಡದ ಕೆಲಸಕ್ಕೆ ಬ್ರೇಕ್..
೩- ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ ಅದರ ಬಗ್ಗೆ 10 ದಿನಗಳಲ್ಲಿ ಮಾಹಿತಿ ಬೇಕು..
೪- ಕೆಲಸಗಳು ಆಗಿರೋ ಸ್ಥಳಗಳಿಗೆ ಖುದ್ದು ನಾವೇ ಹೋಗಿ ಚಕ್ ಮಾಡೋಣ..
೫- ಅಕ್ರಮಗಳಿಗೆ ಆಸ್ಪದ  ಇಲ್ಲದಂತೆ ಟಿಡಿಆರ್ ಜಾರಿಗೆ ತರಬೇಕು..
೬- ಯಾವುದೇ ಯೋಜನೆ ಕಾಮಾಗಾರಿಗೂ ಮುನ್ನ ಪೋಟೋ ವಿಡಿಯೋ ಮಾಡಲು ಸೂಚನೆ
೭- ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ..

ಇನ್ನೂ ಇಂದು ನಡೆದ ಬಿಬಿಎಂಪಿ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳು ಚರ್ಚೆ ನಡೆದಿದೆ, ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದ ಬಿಬಿಎಂಪಿ ಚುನಾವಣೆ ಬಗ್ಗೆನೂ ಕೂಡ ಸಭೆಯಲ್ಲಿ ಡಿಸಿಎಂ ಚರ್ಚಿಸಿದ್ದಾರೆ, ಯಾವಾಗ ಬೇಕಾದ್ರೂ ಎಲೆಕ್ಷನ್ ಮಾಡುತ್ತೇವೆ ಅಧಿಕಾರಿಗಳು ತಯಾರಿರಿ ಎಂಬ ಸೂಚನೆಯನ್ನು ಕೂಡ ನೀಡಿದ್ದಾರೆ. ಇನ್ನೂ ಬಿಬಿಎಂಪಿ ವಾರ್ಡ್ ವಿಂಗಡಣೆಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಅದಷ್ಟು ಬೇಗ ಕಾರ್ಯಗತ ಗೊಳಿಸಲಾಗಿವುದು ಎಂದ್ರು, ಇನ್ನೂ ರಾಜಕಾಲುವೆ ಒತ್ತುವರಿ ಅರ್ಧಕ್ಕೆ ಸ್ಟಾಫ್ ಆಗಿದ್ದು, ಅದನ್ನು ಕೂಡ ಆರಂಭಿಸಲಾಗಿವುದು ಎಂದರು, ಒಟ್ಟಾರೆಯಾಗಿ ಇಂದು ಬಿಬಿಎಂಪಿ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತುಕೊಡಬೇಕು, ಬಿಬಿಎಂಪಿಯನ್ನ ಭ್ರಷ್ಟಾಚಾರ ರಹಿತ ಕಾರ್ಪೋರೇಷನ್ ಮಾಡಲು ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾಜಿ ಸಿಎಂ ಕಿಡಿ