ಸಿದ್ದರಾಮಯ್ಯರನ್ನೇ ಮೊದಲು ಮುಖ್ಯಮಂತ್ರಿ ಮಾಡಲು ಸಿದ್ದು ಬಣದ ಟೀಮ್ ನಿಂದ ಮಹತ್ವದ ತಂತ್ರಗಾರಿಕೆ ಮಾಡಲಾಗ್ತಿದೆ.ಮೊದಲು ಸಿದ್ದರಾಮಯ್ಯನೇ ಸಿಎಂ ಆಗಬೇಕೆಂಬ ತಂತ್ರ ಹೂಡಲಾಗಿದೆ.ಈ ಹಿನ್ನೆಲೆ ಗೆದ್ದ ಶಾಸಕರಿಗೆ ದೂರವಾಣಿ ಕರೆ ಮಾಡಲಾಗಿದೆ.ಗೆದ್ದ ಎಲ್ಲ ಶಾಸಕರ ಸಂಪರ್ಕ ಮಾಡಿ ಸಂಜೆಯ ಸಭೆಯಲ್ಲಿ ಸಿದ್ದು ಪರ ಬೆಂಬಲ ಸೂಚಿಸಲು ಮನವಿ ಮಾಡಲಾಗಿದ್ದು.ಸಿದ್ದರಾಮಯ್ಯ ಆಪ್ತ ಶಾಸಕರಿಂದ ದೂರವಾಣಿ ಮೂಲಕ ಮನವಿ ಕೂಡ ಮಾಡಲಾಗುತ್ತೆ.
ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಸಿದ್ದು ಬಣದ ಜೊತೆ ಸಭೆ ಮಾಡಲ್ಲಿದ್ದಾರೆ.ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇರುವ ಬೈರತಿ ಸುರೇಶ್ ಗೆ ಸೇರಿದ ಕಟ್ಟಡದಲ್ಲಿ ಮೀಟಿಂಗ್ ನಡೆಯಲಿದ್ದು,ಸಭೆಯಲ್ಲಿ ಕೆ.ಜೆಜಾರ್ಜ್, ಎಂಬಿ ಪಾಟೀಲ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಸೇರಿದಂತೆ ಆಪ್ತರು ಭಾಗಿಯಾಗಲ್ಲಿದ್ದಾರೆ.