ಬೆಂಗಳೂರು : ಕೊರೊನಾ ಸೋಂಕು ಮತ್ತೆ ಹೆಚ್ಚಾಗಿದ್ದ ಪರಿಣಾಮ ಬೆಂಗಳೂರು ಸಹಿತ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು.
ಇದೀಗ ನಾಳೆ ನಡೆಯಲಿರುವ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಸಭೆಯಲ್ಲಿ ಪುನಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಲೂ ಎಲ್ಲೂ ಕೂಡಾ ಸಂಪೂರ್ಣ ಶಾಲೆ ಕ್ಲೋಸ್ ಆಗಿಲ್ಲ. ಕೊರೊನಾ ಸೋಂಕು ಹೆಚ್ಚು ಇರುವ ಕಡೆ ಡಿಸಿಗಳು ರಜೆ ಘೋಷಣೆ ಮಾಡಿದ್ದಾರೆ. 85% ಶಾಲೆಗಳು ಈಗಾಗಲೇ ರಜೆ ಇಲ್ಲದೆ ರಾಜ್ಯದಲ್ಲಿ ನಡೆದಿದೆ.
ಮೂರು ಡಿಜಿಟ್ ಇದ್ದ ಸೋಂಕು ಈಗ 4 ಡಿಜಿಟ್ನಲ್ಲಿ ಶಾಲೆಗಳಲ್ಲಿ ಕಾಣಿಸುತ್ತಿದೆ. ಹೀಗಾಗಿ ನಾಳೆ ತಜ್ಞರ ಮುಂದೆ ಎಲ್ಲಾ ಅಂಕಿ ಅಂಶಗಳನ್ನು ಮುಂದೆ ಇಡುತ್ತೇವೆ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.