Publish Date: Thu, 28 Jan 2021 (12:38 IST)
Updated Date: Thu, 28 Jan 2021 (12:41 IST)
ಬೆಳಗಾವಿ : ಬೆಳಗಾವಿ ನೆಲ ಕರ್ನಾಟಕದ ಒಂದು ಅಂಗ. ಬೆಳಗಾವಿ ನಮ್ಮದು ಎಂದ ಮಹಾರಾಷ್ಟ್ರ ಸಿಎಂ ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಗಡಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಗಡಿ ಜಿಲ್ಲೆ ಮರಾಠಿಗರು ನಿಮ್ಮನ್ನು ಬೆಂಬಲಿಸಲ್ಲ. ರಾಜ್ಯದಲ್ಲಿ ಮರಾಠಿಗರು ಖುಷಿಯಾಗಿದ್ದಾರೆ. ಮಹಾ ಗಡಿನಾಡಿನಲ್ಲಿ ಕನ್ನಡಿಗರು ಇದ್ದಾರೆ. ಕರ್ನಾಟಕ ಶಾಲೆಗಳಲ್ಲಿ ಕಲಿಯಲು ಇಷ್ಟಪಡ್ತಾರೆ. ಮರಾಠಿಗರು ಮಹಾರಾಷ್ಟ್ರಕ್ಕೆ ಹೋಗ್ತಿವಿ ಎಂದಿಲ್ಲ ಎಂದು ಮಹಾರಾಷ್ಟ್ರ ಸಿಎಂಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.