Webdunia - Bharat's app for daily news and videos

Install App

ವಿವಾಹಿತ ಮಹಿಳೆಯ ಭೀಕರ ಕೊಲೆ; ಪ್ರಿಯಕರ, ಪತಿ ಸುತ್ತ ಅನುಮಾನದ ಚಿತ್ತ?

Webdunia
ಶುಕ್ರವಾರ, 7 ಡಿಸೆಂಬರ್ 2018 (19:03 IST)
22 ವರ್ಷ ಹರೆಯದ ಆ ಮಹಿಳೆ ತನ್ನ ಗಂಡನನ್ನು ಬಿಟ್ಟಿದ್ದಳು. ಪ್ರಿಯಕರನೊಂದಿಗೆ ಒಂದಷ್ಟು ದಿನ ಜೀವನ ನಡೆಸಿದ್ದಳು. ಕೊನೆಗೆ ತನ್ನ ಊರಲ್ಲಿ ಬಂದು ನೆಲೆಸಿದ್ದಳು. ಆದರೆ ಮಾಡಬಾರದ್ದನ್ನು ಮಾಡಿದರೆ ಆಗಬಾರದು ಆಗುತ್ತದೆ ಎನ್ನುತ್ತಾರಲ್ಲ. ಆ ಮಾತಿನಂತೆ ಕೊನೆಗೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾಶಿರೂರು ಗ್ರಾಮದಲ್ಲಿ ಮಹಿಳೆಯನ್ನು ಕತ್ತು ಸೀಳಿ ಭಯಾನಕವಾಗಿ ಕೊಲೆ ಮಾಡಲಾಗಿದೆ. ಗೀತಾ ಹಳಿಗೋಡೆ (22)ಕೊಲೆಯಾದವರು.

ಗೀತಾ ವರ್ಷಗಳ ಕೆಳಗೆ ತನ್ನ ಗಂಡನನ್ನು ಬಿಟ್ಟು ಹೋಗಿದ್ದಳು. ಪರ ಪುರುಷನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದಳಂತೆ. ಅದಾದ ಬಳಿಕ ಆತನನ್ನೂ ಬಿಟ್ಟು ತನ್ನ ತವರು ಊರಾಗಿರುವ ದರ್ಗಾಶಿರೂರದಲ್ಲಿ ಬಂದು ವಾಸ ಮಾಡುತ್ತಿದ್ದಳು. ಅಲ್ಲದೇ ತನ್ನ ಗಂಡನ ವಿರುದ್ಧ ಆಸ್ತಿಗಾಗಿ ಪ್ರಕರಣ ದಾಖಲು ಮಾಡಿದ್ದಳು. ಹೀಗಾಗಿ ಪತಿ ಇಲ್ಲವೇ ಪ್ರಿಯರಕ ಗೀತಾಳ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments