Select Your Language

Notifications

webdunia
webdunia
webdunia
webdunia

ಭಾವಿ ಅಳಿಯನಿಂದ ಮಾವನ ಹತ್ಯೆ

ಭಾವಿ ಅಳಿಯನಿಂದ ಮಾವನ ಹತ್ಯೆ
ಬೆಂಗಳೂರು , ಶನಿವಾರ, 4 ಜೂನ್ 2016 (08:47 IST)
ನಿಶ್ಚಿತಾರ್ಥವಾದ ಕೆಲ ದಿನಗಳ ಬಳಿಕ ಮದುವೆಯನ್ನು ಮುರಿದುಕೊಳ್ಳಲು ಯತ್ನಿಸಿದರು ಎಂಬ ಕಾರಣಕ್ಕೆ ಯುವತಿಯ ತಂದೆಯನ್ನು ವರ ಹತ್ಯೆಗೈದ ಘಟನೆ ರಾಜ್ಯ ರಾಜಧಾನಿಯ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. 
 
ಕೊಲೆಯಾದ ವ್ಯಕ್ತಿಯನ್ನು ಕೆ.ಪಿ. ಅಗ್ರಹಾರದ ನಿವಾಸಿ ಬಾಬು (65) ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಆಟೋಚಾಲಕ ರಮೇಶ್ (25) ಎಂದು ಗುರುತಿಸಲಾಗಿದೆ.
 
ತಮ್ಮದೇ ನಗರದ ನಿವಾಸಿಯಾದ ರಮೇಶ್ ಜತೆ ಬಾಬು ತಮ್ಮ ಮಗಳು ಪ್ರಿಯಾ ಮದುವೆಯನ್ನು ನಿಶ್ಚಯಿಸಿದ್ದರು. ಇನ್ನೇನು ಮದುವೆಯಾಗಬೇಕು ಎನ್ನುವಾಗ ಬಾಬುಗೆ ರಮೇಶ್ ಅವರ ನಡವಳಿಕೆ ಬಗ್ಗೆ ಸಂಶಯ ಹುಟ್ಟಿಕೊಂಡಿದ್ದು ಹೀಗಾಗಿ ಮದುವೆಯನ್ನು ಮುರಿದುಕೊಳ್ಳಲು ಬಯಸಿದ್ದರು ಎನ್ನಲಾಗುತ್ತಿದೆ. 
 
ಈ ಕಾರಣಕ್ಕೆ ಕೋಪಗೊಂಡ ರಮೇಶ್ ಶುಕ್ರವಾರ ಬಾಬು ಅವರ ಮನೆಗೆ ಬಂದು ಗಲಾಟೆ ಮಾಡಿ ಕೋಪದ ಭರದಲ್ಲಿ ಪ್ರಿಯಾ ತಂದೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ರಕ್ತಸ್ರಾವದಿಂದಾಗಿ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. 
 
ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ವೇಳೆಗೆ ಇಂಡೋ-ಬಾಂಗ್ಲಾ ಗಡಿ ಬೇಲಿ ಕಾರ್ಯ ಮುಕ್ತಾಯ: ಸದಾನಂದಗೌಡ