Publish Date: Mon, 01 Aug 2016 (16:24 IST)
Updated Date: Mon, 01 Aug 2016 (16:25 IST)
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಪ್ರಕರಣದ ಆರೋಪಿ ಸಿಎಂ ಆಪ್ತ ಕೆ.ಮರಿಗೌಡ, ಸಿಎಂ ಪುತ್ರ ರಾಕೇಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಹೈಕೊರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಯವರಿಗೆ ಧಮ್ಕಿ ನೀಡಿ ಹಲವು ದಿನಗಳಿಂದ ತಲೆ ಮರೆಸಿಕೊಂಡು ತಿರುಗಾಡುತ್ತಿರುವ ಮಾಜಿ ಜಿಲ್ಲಾ ಪಂಜಾಯತ್ ಅಧ್ಯಕ್ಷ ಹಾಗೂ ಸಿಎಂ ಆಪ್ತ ಕೆ.ಮರಿಗೌಡ ಪೊಲೀಸರಿಗೆ ಶರಣಾಗುವುದಾದರೇ ಹಾಗೂ ಪೊಲೀಸರ ವಶದಲ್ಲಿಯೇ ರಾಕೇಶ್ ಅಂತಿಮ ದರ್ಶನದಲ್ಲಿ ಪಾಲ್ಗೊಳುವುದಾದರೇ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ನ್ಯಾಯಾಧೀಶರಾದ ಶ್ರೀನಿವಾಸ್ ಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.
ನ್ಯಾಯಧೀಶರ ಅಭಿಪ್ರಾಯಕ್ಕೆ ಕೆ.ಮರಿಗೌಡ ಪರ ವಕೀಲ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದ್ದು, ಪ್ರಕರಣದ ವಿಚಾರಣೆಯನ್ನು ಅಗಸ್ಟ್ 3 ಕ್ಕೆ ಮುಂದೂಡಿ ನ್ಯಾಯಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.