ಮಲ್ಪೆ ಬೀಚ್ ನಲ್ಲಿ ಮೀನು ರಾಶಿ...!!!

Webdunia
ಮಂಗಳವಾರ, 20 ಸೆಪ್ಟಂಬರ್ 2022 (15:32 IST)
ಸೋಮವಾರ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಕಡಲ ತೀರಕ್ಕೆ ಸಮುದ್ರದ ಪಶ್ಚಿಮದ ಕಡೆಯಿಂದ ಪೂರ್ವದ ಕಡೆಗೆ ಸಾಗಿ ಅಲೆಗಳೊಂದಿಗೆ ತೀರಕ್ಕೆ ರಾಶಿ ರಾಶಿ ಮೀನುಗಳು ಅಪ್ಪಳಿಸಿ ಬಂದಿದ್ದವು. ಬೀಚ್‌ನ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ರಾಶಿ ರಾಶಿ ಬೂತಾಯಿ ಮೀನುಗಳು ಬಿದ್ದಿದ್ದವು.
ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿ ಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಕೊನೆಗೆ ರಾಶಿ ರಾಶಿ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋದರು.
100-200 ಮೀಟರ್ ಉದ್ದಕ್ಕೂ ತೀರಕ್ಕೆ ಬೂತಾಯಿ ಮೀನು ಅಪ್ಪಳಿಸಿದ್ದವು. ಸುಮಾರು 500ರಿಂದ 600 ಕೆ.ಜಿ.ಗೂ ಅಧಿಕ ಬೂತಾಯಿ ಮೀನು ದಡದಲ್ಲಿ ರಾಶಿ ಬಿದ್ದಿದ್ದವು. ಈ ಮೀನುಗಳನ್ನು ಕಡಲ ಸಮೀಪದ ನಿವಾಸಿಗಳು, ಮೀನುಗಾರರು ಹೆಕ್ಕಲು ಮುಗಿ ಬಿದ್ದಿದ್ದು, ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಬಿಡುಗಡೆ: ಮೋದಿ ಸರ್ಕಾರದಿಂದ ಬಡವರಿಗೆ ಗಿಫ್ಟ್

Karnataka Weather: ವಾರಂತ್ಯದಲ್ಲಿ ಈ ಜಿಲ್ಲೆಗಳಿಗೆ ಮಳೆ ಸೂಚನೆ

ಡಿಎಂಕೆ ನಿರ್ಗಮನಕ್ಕೆ ಕ್ಷಣಗಣನೆ ಆರಂಭ, ಎನ್‌ಡಿಎ ಸರ್ಕಾರ ರಚನೆ: ಪ್ರಧಾನಿ ನರೇಂದ್ರ ಮೋದಿ

ಪವಿತ್ರಾ ಗೌಡಗೆ ಮನೆಯೂಟಕ್ಕೆ ಕೋರ್ಟ್ ನಿರಾಕರಣೆ, ಅಲೋಕ್ ಕುಮಾರ್ ಅಚ್ಚರಿ ಹೇಳಿಕೆ

ಮಕ್ಕಳ ಸುರಕ್ಷತೆಗಾಗಿ ಬೆಳ್ಳಂಬೆಳ್ಳಗ್ಗೆ ಡ್ಯೂಟಿಗಿಳಿದ ಖಾಕಿ, ಸಿಕ್ಕಿಬಿದ್ದವರಾರು ಗೊತ್ತಾ

ಮುಂದಿನ ಸುದ್ದಿ
Show comments