Webdunia - Bharat's app for daily news and videos

Install App

ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ‌ ಲಿಂಬಾವಳಿ ರೋಡ್‌ ಶೋ ಮೂಲಕ ಮತಯಾಚನೆ

Webdunia
ಬುಧವಾರ, 3 ಮೇ 2023 (19:21 IST)
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ‌ ಮಾಡಿರುವ ಅಭಿವೃದ್ದಿ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಏನು ಗೊತ್ತು ? ಒಂದು ತಿಂಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ‌. ಕಳೆದ ಒಂದು ದಶಕಗಳಿಂದ ಇಲ್ಲಿ ನಮ್ಮ‌ ಯಾಜಮಾನರು ಮಾಡಿರುವ ಕೆಲಸವೇ ನನಗೆ ಶ್ರೀರಕ್ಷೆ. ಎಂದು ಬಿಜೆಪಿ ಮಹಿಳಾ ಆಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. 
ಬುಧವಾರ ಬೆಳಗ್ಗೆಯಿಂದಲೇ ಪ್ರಚಾರ ಕಾರ್ಯದಿಂದ ತೊಡಗಿಸಿಕೊಂಡಿರುವ ಮಂಜುಳಾ ಅರವಿಂದ ಲಿಂಬಾವಳಿ ವರ್ತೂರು, ಬಳಗೆರೆ, ಸೊರುಹುಣಸಿ, ಗುಂಜೂರು, ಕಾಚಮಾರನಹಳ್ಳಿ,  ಹಾಗೂ ಕೊಡತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರಳಿ ಮತಯಾಚಿಸಿದರು‌. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಇಂಜಿನ್ ಸರ್ಕಾರವಿದ್ದು ಭವಿಷ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು.2008ರಿಂದ ಇದುವರೆಗೂ ಮೂರು ಬಾರಿ ಅರವಿಂದ ಲಿಂಬಾವಳಿ ಜನರಿಂದ ಆಯ್ಕೆಯಾಗಿದ್ದಾರೆ‌.‌ ರಸ್ತೆ, ಚರಂಡಿ ಹಾಗೂ ಕೆರೆ ಅಭಿವೃದ್ಧಿ ಸೇರಿದಂತೆ ಹಲವು ರೀತಿಯ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ.  ಕಾರ್ಯಕರ್ತರ ಅಣಿತಿಯಂತೆ ಕೆಲಸ ಮಾಡಿದ್ದಾರೆ. ಅವರ ಕೆಲಸವೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
 
ಕಳೆದ ಮೂರು ಅವಧಿಗಳಲ್ಲಿಯೂ ತಲಾ ಒಬ್ಬೊಬ್ಬರಂತೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದೀಗ ಅವರೆಲ್ಲರೂ ಕಳೆದುಹೋಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಆಭ್ಯರ್ಥಿ ಹೇಳುತ್ತಿದ್ದಾರೆ. ಇಷ್ಟು ವರ್ಷ ಎಲ್ಲಿ ಹೋಗಿದ್ದರು. ಸುಖಾಸುಮ್ಮನೆ ಆರೋಪ ಸರಿಯಲ್ಲ. ಕ್ಷೇತ್ರ ಪರಿವೀಕ್ಷಣೆ ನಡೆಸಿದಾಗ ಕೆಲಸ ಮಾಡಿರುವುದು ಗೊತ್ತಾಗುತ್ತದೆ‌. ಈ ಬಾರಿ ಕ್ಷೇತ್ರದಿಂದ ಗಂಟುಮೂಟೆ ಕಟ್ಟುವಂತೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ
Show comments