Select Your Language

Notifications

webdunia
webdunia
webdunia
webdunia

ಮ್ಯಾನ್‌ಹೋಲ್‌ನಲ್ಲಿ ಮೂವರು ಬಲಿ

ಮ್ಯಾನ್‌ಹೋಲ್‌ನಲ್ಲಿ ಮೂವರು ಬಲಿ
ಬೆಂಗಳೂರು , ಮಂಗಳವಾರ, 7 ಮಾರ್ಚ್ 2017 (08:20 IST)
ಮ್ಯಾನ್‌ಹೋಲ್ ದುರಸ್ತಿ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಮತ್ತು ಟ್ರಾಕ್ಟರ್ ಚಾಲಕ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಸಿವಿ ರಾಮನ್ ನಗರದ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

 
ಸೋಮವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಟ್ರಾಕ್ಟರ್‌ನಲ್ಲಿ ಬಂದಿದ್ದ ಇಬ್ಬರು ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದಾರೆ. 17 ಅಡಿ ಕೆಳಕ್ಕೆ ಇಳಿದಿದ್ದ ಅವರು ಆಮ್ಲಜನಕದ ಕೊರತೆಯಿಂದ ಕಿರುಚಲು ಪ್ರಾರಂಭಿಸುತ್ತಿದ್ದಂತೆ ಟ್ರಾಕ್ಟರ್ ಚಾಲಕ ಕೆಳಕ್ಕೆ ಇಳಿದಿದ್ದಾನೆ. ಆದರೆ ಕಾಪಾಡಲು ಹೋದವನು ಸೇರಿದಂತೆ ಮೂವರು ಜೀವ ಕಳೆದುಕೊಂಡಿದ್ದಾರೆ.
 
ಮೃತರನ್ನು ಇನ್ನುವರೆಗೆ ಗುರುತಿಸಲಾಗಿಲ್ಲ. ಇವರು ಮೂಲತಃ ಆಂಧ್ರದವರೆಂದು ಹೇಳಲಾಗುತ್ತಿದೆ.
 
ರಾತ್ರಿ 1 ಗಂಟೆ ಸುಮಾರಿಗೆ ಈ ಕುರಿತು ಮಾಹಿತಿ ಪಡೆದ  ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಶವಗಳನ್ನು ಮೇಲೆತ್ತಿದ್ದಾರೆ. 
 
ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಬಾರದು, ಯಂತ್ರಗಳನ್ನು ಬಳಸಬೇಕು ಎಂಬ ಕಾನೂನಿದ್ದರೂ ಕಾರ್ಮಿಕರನ್ನು ಯಮಪಾಶಕ್ಕೆ ತಳ್ಳಿದ ಗುತ್ತಿಗೆದಾರ ಮತ್ತು ಆಳುವವರ ನಿರ್ಲಕ್ಷಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
 
ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸರು ನಿರ್ಲಕ್ಷ್ಯದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟಿ ಪದ್ಮಾ ಕುಮುಟಾ ಇನ್ನಿಲ್ಲ