Select Your Language

Notifications

webdunia
webdunia
webdunia
webdunia

ಮಂಗಳೂರು ಕುಕ್ಕರ್ ಬ್ಲಾಸ್ಟ್ ಉಗ್ರ ಶಾರಿಕ್ ಗೆ 10 ವರ್ಷದ ಜೈಲು ಶಿಕ್ಷೆ

Mangalore blast
Photo Credit: X
ಮಂಗಳೂರು: 2022 ರಲ್ಲಿ ನಡೆದಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಉಗ್ರ ಶಾರಿಕ್ ಗೆ ಎನ್ಐಎ ವಿಶೇಷ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2022 ರ ನವಂಬರ್ 19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಆರೋಪಿ ಶಾರಿಕ್ ಬಾಂಬ್ ಸಾಗಿಸುತ್ತಿರುವಾಗಲೇ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕನಿಗೆ ಗಾಯಗಳಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ ಅಪರಾಧದ ಮೇರೆಗೆ ಉಗ್ರ ಶಾರಿಕ್ ಗೆ ಎನ್ಐಎ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣವನ್ನು ಎನ್ಐಎ ತಂಡ ತನಿಖೆ ನಡೆಸಿತ್ತು.

ಮಂಗಳೂರಿನ ಕದ್ರಿ ದೇವಸ್ಥಾನ ಅಥವಾ ಜನನಿಬಿಡ ಸ್ಥಳದಲ್ಲಿ ಸ್ಪೋಟ ನಡೆಸಲು ಶಾರಿಕ್ ಸಂಚು ರೂಪಿಸಿದ್ದ. ಆದರೆ ಅದಕ್ಕಾಗಿ ಬಾಂಬ್ ಸಾಗಿಸುತ್ತಿರುವಾಗಲೇ ಸ್ಪೋಟಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿ ಹೋಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಕೊಂದು ಮರದ ಬಾಕ್ಸ್‌ನಲ್ಲಿ ತುಂಬಿ ಸಿಮೆಂಟ್‌ನಲ್ಲಿ ಸೀಲ್ ಮಾಡಿದ ಪತಿ