Select Your Language

Notifications

webdunia
webdunia
webdunia
webdunia

ಕಾವೇರಿ ವಿಚಾರದಲ್ಲಿ ಬಿಟ್ಟಿ ಸಲಹೆ ನೀಡಿದ ಪದ್ಮಾವತಿ ರಮ್ಯಾ....

ಕಾವೇರಿ ವಿಚಾರ
ಮಂಡ್ಯ , ಮಂಗಳವಾರ, 20 ಸೆಪ್ಟಂಬರ್ 2016 (12:04 IST)
ಕಾವೇರಿ ಹೋರಾಟದಲ್ಲಿ ಬೀದಿಗಿಳಿಯದೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಾಜರಾಗಿ ನೀರು ಸಂರಕ್ಷಣೆಯ ಕುರಿತು ಬಿಟ್ಟಿ ಸಲಹೆ ನೀಡಿದ್ದಾರೆ. 
 
ನೀರಿನ ಸಮಸ್ಯೆ ಕೇವಲ ಕರ್ನಾಟಕ ರಾಜ್ಯವನ್ನಷ್ಟೇ ಕಾಡುತ್ತಿಲ್ಲ. ಬದಲಾಗಿ ಈಡಿ ವಿಶ್ವವನ್ನೇ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಜೀವ ಜಲವನ್ನು ಹೇಗೆ ಸಂರಕ್ಷಿಸಬೇಕು. ಹಾಗೂ 1892 ರಿಂದ 2016 ರವರೆಗಿನ ನೀರಿನ ಸಮಸ್ಯೆ ಕುರಿತು ಕತೆ ಕಟ್ಟಿ ದಿವ್ಯಸ್ಪಂದನ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಸ್ಟೇಟಸ್ ಶೇರ್ ಮಾಡುವ ಮೂಲಕ ಜನರಿಗೆ ಬಿಟ್ಟಿ ಸಲಹೆ ನೀಡಿದ್ದಾರೆ. 
 
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿ ಹಾಗೂ ಕರ್ನಾಟಕ ಹೊತ್ತಿ ಉರಿಯುವ ಸಮಯದಲ್ಲೂ ಮಾಜಿ ಸಂಸದೆ ರಮ್ಯಾ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕನ್ನಡ ಚಲನಚಿತ್ರದ ಗಣ್ಯರು ಕೈಗೊಂಡಿದ್ದ ಹೋರಾಟದಲ್ಲೂ ರಮ್ಯಾ ಭಾಗಿಯಾಗದೇ, ತಮಗೂ ಹಾಗೂ ರಾಜ್ಯದ ಸಮಸ್ಯೆಗೂ ಸಂಬಂಧವೇ ಇಲ್ಲ ಎನ್ನುವಂತೆ ಮೌನ ವಹಿಸಿದ್ದರು. ಆದರೆ, ಇಗ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಶೇರ್ ಮಾಡುವ ಮೂಲಕ ಜನತೆಗೆ ಬಿಟ್ಟಿ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಪ್ರತೀಕಾರಕ್ಕೆ ಆಗ್ರಹಿಸಿದ ಹುತಾತ್ಮನ ತಂದೆ