ಪ್ರೀತಿಸಿ ವಿವಾಹವಾಗಿದ್ದ ಪತಿಯೇ ತನ್ನ ತಂದೆಯೊಂದಿಗೆ ಸೇರಿ ಪತ್ನಿ ಕೊಲೆಗೆ ಯತ್ನಿಸಿದ ಘಟನೆ ಕುಣಿಗಲ್‌ನಲ್ಲಿ ನಡೆದಿದೆ.
ಹಾಸನ ಮೂಲದ ಗೀತಾ (26) ಹಲ್ಲೆಗೊಳಗಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರವಿ ಹಾಗೂ ಮಾವ ಶ್ರೀರಂಗಪ್ಪನನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಗೀತಾ ಕುಣಿಗಲ್ ತಾಲೂಕಿನ ಯಡಿಯೂರ ಹೋಬಳಿಯ ಹರಿಕೆಹಳ್ಳಿ ಗ್ರಾಮದ ರವಿ ಎನ್ನುವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅವರಿಬ್ಬರ ವಿವಾಹಕ್ಕೆ ರವಿ ಪೋಷಕರ ವಿರೋಧವಿತ್ತು. ಆದರೆ ಅದನ್ನು ಲೆಕ್ಕಿಸದೆ ಒಂದಾಗಿದ್ದ ಜೋಡಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ವಾಸವಾಗಿತ್ತು.
ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲ ದಿನಗಳ ಬಳಿಕ ಪತಿ ರವಿಯೂ ಸಹ ಪತ್ನಿಯ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಿದ್ದ. ರವಿಯ ಈ ಅನುಮಾನಕ್ಕೆ ಆತನ ತಂದೆ ತುಪ್ಪ ಸುರಿದಿದ್ದ. ಬಳಿಕ ಇಬ್ಬರು ಸೇರಿ ಗೀತಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅಂತೆಯೇ ಗುರುವಾರ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದು ಅದೃಷ್ಟವಶಾತ್ ಬದುಕುಳಿದಿರುವ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ