ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಣ್ಣನ ಮಗನನ್ನ ಕೊಚ್ಚಿ ಕೊಂದ ಚಿಕ್ಕಪ್ಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋವಳ್ಳಿಯಲ್ಲಿ ನಡೆದಿದೆ. ಮರಶುರಾಮ ಮಾಳಗಿ ಹತ್ಯೆಗೀಡಾದ ವ್ಯಕ್ತಿ.
ಚಿಕ್ಕಪ್ಪ ಕರಿಯಪ್ಪ ಮಾಳಗಿ ಪತ್ನಿ ಜೊತೆ ಪರಶುರಾಮ್`ಗೆ ಅಕ್ರಮ ಸಂಬಂಧವಿತ್ತು. ಮದುವೆಯಾಗಿ 2 ಮಕ್ಕಳಾದರೂ ಪರಶುರಾಮ್ ಚಿಕ್ಕಮ್ಮನ ಸಂಘ ಬಿಟ್ಟಿರಲಿಲ್ಲ. ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಚಿಕ್ಕಪ್ಪ ಕರಿಯಪ್ಪ, ಕಳೆದ ರಾತ್ರಿ ಮಲಗಿದ್ದ ಪರಶುರಾಮ್ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಕೊಂದಿದ್ದಾನೆ.
ಜಮಖಂಡಿ ಡಿವೈಎಸ್ಪಿ ರಾಮನಗೌಡ ಹಟ್ಟಿ ಗ್ರಾಮಕ್ಕೆ ಭೀಟಿ ನೀಡಿ ಘಟನೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಕರಿಯಪ್ಪ ಮಾಳಗಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.