Webdunia - Bharat's app for daily news and videos

Install App

ಮಾ.01 ರಂದು ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ

Webdunia
ಸೋಮವಾರ, 28 ಫೆಬ್ರವರಿ 2022 (21:03 IST)
ತಾಲ್ಲೂಕಿನ ಭಾಗಮಂಡಲ ಶ್ರೀ,ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರೂಢಿ ಸಂಪ್ರದಾಯದಂತೆ ಮಾರ್ಚ್, 01 ರಂದು ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಲಿದೆ. 
       ಮಾರ್ಚ್, 01 ರಂದು ಬೆಳಗ್ಗೆ 7 ಗಂಟೆಗೆ ಶತರುದಾಭಿಷೇಕ, ಬೆಳಗ್ಗೆ 8 ಗಂಟೆಗೆ ರುದ್ರಹೋಮ, ಮಧ್ಯಾಹ್ನ 12 ಗಂಟೆಗೆ ರುದ್ರಹೋಮದ ಪೂರ್ಣಾಹುತಿ, ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ, ದೇವರ ಉತ್ಸವ ಬಲಿ ಮತ್ತು ಪ್ರಸಾದ ವಿತರಣೆ, ಸಂಜೆ 5.30 ಗಂಟೆಗೆ ತಾಯಂಬಕ ಸೇವೆ, ಸಂ.6 ಗಂಟೆಗೆ ದೀಪಾರಾಧನೆ, ಸಂ.6.30 ಗಂಟೆಗೆ ಏಕದಶ ರುದ್ರಾಭಿಷೇಕ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ, ರಾ.10 ಗಂಟೆಗೆ ತ್ರಿವೇಣಿ ಸಂಗಮದಲ್ಲಿ ಕಟ್ಟೆ ಪೂಜೆ ಮತ್ತು ರಾತ್ರಿ 11 ಗಂಟೆಗೆ ಯಕ್ಷಗಾನ ಬಯಲಾಟ ನಡೆಯಲಿದೆ. 
        ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭಕ್ತಾಧಿಗಳು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಾಗೂ ಭಕ್ತಾಧಿಗಳು ಸ್ವ ಇಚ್ಛೆಯಿಂದ ದೇವಾಲಯದ ವತಿಯಿಂದ ನಡೆಯಲಿರುವ ಕಾರ್ಯಕ್ರಮಗಳ ಪ್ರಾಯೋಜಕತ್ವನ್ನು ಪಡೆಯಲು ಇಚ್ಛಿಸಿದಲ್ಲಿ, ತಗಲುವ ವೆಚ್ಚವನ್ನು ತಾವೇ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹೆಸರು ನೋಂದಾಯಿಸಲು ಹೆಚ್ಚಿನ ಮಾಹಿತಿಗೆ 9972973770 ನ್ನು ಸಂಪರ್ಕಿಸಬಹುದು ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments