Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದವರು ಸುಮ್ಮನೇ ಖ್ಯಾತೇ ತೆಗೆದರೆ ಸುಮ್ಮನಿರಲ್ಲ: ಬೈರತಿ ಸುರೇಶ್‌

Karnataka Bus Driver Attack

Sampriya

ಕೋಲಾರ , ಸೋಮವಾರ, 24 ಫೆಬ್ರವರಿ 2025 (17:40 IST)
Photo Courtesy X
ಕೋಲಾರ: ಮಹಾರಾಷ್ಟ್ರದವರು ರಾಜ್ಯದಲ್ಲಿ ಕ್ಯಾತೆ ತೆಗೆದು, ಇಲ್ಲಿನ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದರೆ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ರಾಜ್ಯಮಟ್ಟದ ಜನಪರ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ಮಾಧ್ಯಮದವರ ಬಳಿ ಮಾತನಾಡಿದ ಅವರು, ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ಸರ್ಕಾರ ಉಗ್ರ ಪ್ರತಿಭಟನೆ ನಡೆಸುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇವೆ ಎಂದರು.

ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಎಸ್‌ಸಿಪಿ ಟಿಎಸ್‌ಪಿಗೆ ಅನುದಾನ ನೀಡಿದ್ದು, ಅವಿರಗೆ ದಲಿತರ ಬಗ್ಗೆ ಭಾರೀ ಕಾಳಜಿಯಿದೆ. ಇನ್ನೂ ಅವರಿಗೆ ಇರುವಷ್ಟು ಶೇ.1ರಷ್ಟು ಕಾಳಜಿಯೂ ಉಳಿದ ಪಕ್ಷದವರಿಗೆ ಇಲ್ಲ. ರಾಜಕೀಯ ಕಾರಣಕ್ಕೆ ಬಿಜೆಪಿ, ಜೆಡಿಎಸ್‌ ಮುಖಂಡರು ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ತಿರುಗೇಟು ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ನಿಜ, ಆದರೆ: ಎಚ್‌ಕೆ ಪಾಟೀಲ