ಬೆಂಗಳೂರು: ನೇಪಾಳ ಮೂಲದ ಮಹಾಲಕ್ಷ್ಮಿ ಮರ್ಡರ್ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದ್ದು ಇದರೊಂದಿಗೆ ಕೃತ್ಯ ಹೇಗೆ ನಡೆಯಿತು ಎಂಬುದೂ ಬಯಲಾಗಿದೆ.
ವಯ್ಯಾಲಿಕಾವಲ್ ನ ಮನೆಯೊಂದರಲ್ಲಿ ವಾಸವಿದ್ದ ಮಹಾಲಕ್ಷ್ಮಿಯನ್ನು ಭೀಕರವಾಗಿ ಹತ್ಯೆ ಮಾಡಿ ಮೃತದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಹಂತಕ ಪರಾರಿಯಾಗಿದ್ದ. ಈಕೆಯ ಮೃತದೇಹವನ್ನು ಸಾವಿನ ನಂತರ ಪೀಸ್ ಮಾಡಲಾಗಿದೆಯೇ ಎನ್ನುವುದು ಇನ್ನೂ ಖಚಿತವಾಗಿರಲಿಲ್ಲ.
ಬರೋಬ್ಬರಿ 2 ಗಂಟೆಗಳ ಕಾಲ ವೈದ್ಯರು ಶ್ರಮವಹಿಸಿ ಮೃತಳ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಇಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದ್ದು ಇದು ಆಕೆಯ ಮರ್ಡರ್ ಮಿಸ್ಟರಿಗೆ ಹೊಸ ಟ್ವಿಸ್ ನೀಡುವ ನಿರೀಕ್ಷೆಯಿದೆ. ಇಂದು ಬೌರಿಂಗ್ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮರಣೋತ್ತರ ವರದಿ ಅಧಿಕೃತವಾಗಿ ಸಲ್ಲಿಸಲಿದ್ದಾರೆ.
ಇದೀಗ ಪ್ರಾಥಮಿಕ ವರದಿ ಸಲ್ಲಿಕೆಯಾಗಲಿದ್ದು, ಬಳಿಕ ಕೆಲವೊಂದು ಟೆಸ್ಟ್ ರಿಪೋರ್ಟ್ ಗಳ ಆಧಾರದ ಮೇಲೆ ಅಂತಿಮ ವರದಿ ಕೆಲವು ದಿನಗಳ ನಂತರ ಸಲ್ಲಿಕೆ ಮಾಡಲಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಬಹಿರಂಗವಾದ ಅಂಶಗಳು ಇಲ್ಲಿದೆ:
ಮಹಾಲಕ್ಷ್ಮಿಯ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಲಾಗಿದೆ.
ಚುಚ್ಚಿ ಸಾಯಿಸಿದ ಬಳಿಕ ತಲೆ ಬೇರ್ಪಡಿಸಲಾಗಿದೆ.
ತಲೆ ಬೇರ್ಪಡಿಸಿದ ಬಳಿಕ ಒಟ್ಟು 52 ಪೀಸ್ ಮಾಡಲಾಗಿದೆ
ಮರಣೋತ್ತರ ಪರೀಕ್ಷೆ ವೇಳೆ ಇಷ್ಟೂ ಭಾಗಗಳನ್ನು ವೈದ್ಯರು ಮರು ಜೋಡಿಸಿದ್ದಾರೆ.
ಶ್ವಾಸಕೋಶವನ್ನು ಮಾತ್ರ ಬೇರ್ಪಡಿಸಲಾಗಿತ್ತು
ಇದೀಗ ಕರುಳಿನ ಭಾಗ ಮತ್ತು ಹೊಟ್ಟೆ ಭಾಗವನ್ನು ಟೆಸ್ಟ್ ಗೆ ಕಳುಹಿಸಲಾಗಿದೆ
ಸಾಯಿಸುವ ಮುನ್ನ ವಿಷ ಅಥವಾ ಪ್ರಜ್ಞೆ ತಪ್ಪಿಸಲಾಗಿದೆಯೇ ಎಂದು ವರದಿಯಿಂದ ತಿಳಿಯಬೇಕಿದೆ
ದೇಹದಲ್ಲಿ ವಿಷ ಸೇವನೆ ಖಚಿತವಾಗಲು ಕನಿಷ್ಠ 2 ತಿಂಗಳು ಬೇಕು.