Select Your Language

Notifications

webdunia
webdunia
webdunia
webdunia

ಮಹದಾಯಿ ಮಧ್ಯಂತರ ತೀರ್ಪು ರಾಜ್ಯಕ್ಕೆ ನೋವಿನ ಸಂಗತಿ: ತೋಂಟದಾರ್ಯ ಶ್ರೀಗಳು

ಮಹದಾಯಿ ಮಧ್ಯಂತರ ತೀರ್ಪು ರಾಜ್ಯಕ್ಕೆ ನೋವಿನ ಸಂಗತಿ: ತೋಂಟದಾರ್ಯ ಶ್ರೀಗಳು
ಗದಗ್ , ಶುಕ್ರವಾರ, 29 ಜುಲೈ 2016 (15:12 IST)
ಮಹದಾಯಿ ನ್ಯಾಯಾಧಿಕರಣದ ತೀರ್ಪು ರಾಜ್ಯಕ್ಕೆ ನೋವಿನ ಸಂಗತಿಯಾಗಿದೆ. ಇದು ಈ ಭಾಗದ ಶಾಸಕರು ಮತ್ತು ಸಂಸದರು ನಿರ್ಲಕ್ಷದ ಪರಿಣಾಮ ಎಂದು ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಗದಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಾಧಿಕರಣದ ತೀರ್ಪು ಸರಿಯಾಗಿಲ್ಲ. ನ್ಯಾಯಮೂರ್ತಿಗಳಿಗೆ ಅಂತಃಕರಣ, ಮಾನವೀಯತೆ ಹಾಗೂ ಮನುಷ್ಯತ್ವ ಇರಬೇಕು ಎಂದು ಗುಡುಗಿದರು.
 
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಲಿ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಒಮ್ಮತದ ತೀರ್ಮಾನಕ್ಕೆ ಬರಬೇಕು. ಈ ಮೂಲಕ ಮಹದಾಯಿ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರಿಗೆ ಸ್ವಾಭಿಮಾನವಿಲ್ಲವೇ?: ಎಚ್‌.ಡಿ.ಕುಮಾರಸ್ವಾಮಿ