Select Your Language

Notifications

webdunia
webdunia
webdunia
webdunia

ಮಹಾದಾಯಿ ಪೊಲೀಸ್ ದೌರ್ಜನ್ಯ: ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ತರಾಟೆ

ಮಹಾದಾಯಿ
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2016 (15:46 IST)
ಮಹದಾಯಿ ಹೋರಾಟಗಾರರ ಮೇಲಿನ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ನ್ಯಾಯಾಧೀಶರು ಮಾನವ ಹಕ್ಕುಗಳ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಮಹದಾಯಿ ಹೋರಾಟದಲ್ಲಿ ಪೊಲೀಸರಿಂದ ಅಮಾಯಕರ ಮೇಲೆ ಅಮಾನವೀಯ ದೌರ್ಜನ್ಯ ನಡೆದಿದೆ. ನೀವು ಬೆಂಗಳೂರಿನಲ್ಲಿ ಕುಳಿತು ಮಾಡುವುದೇನು? ನಿಮಗೆ ವಾಹನ ನೀಡಿರುವುದು ಏಕೆ? ಘಟನಾ ಸ್ಥಳಕ್ಕೆ ಹೋಗುವುದಕ್ಕೇನಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು, ಮಾನವ ಹಕ್ಕುಗಳ ಆಯೋಗದ ರಿಜಿಸ್ಟಾರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಪ್ರಕರಣದ ಕುರಿತು ಸಂಪೂರ್ಣ ವರದಿ ನೀಡಲು ಮಾನವ ಹಕ್ಕುಗಳ ಆಯೋಗದ ರಿಜಿಸ್ಟಾರ್‌ ಒಂದು ವಾರಗಳ ಕಾಲಾವಕಾಶ ಕೇಳಿದರು. ಆದರೆ, ನಿಮ್ಮ ವರದಿ ನಿಖರವಾಗಿಲ್ಲ. ಅಲ್ಲಿಯವರೆಗೂ ಪೊಲೀಸರಿಂದ ಲಾಠಿ ಏಟು ತಿಂದವರ ಗತಿ ಏನು ಎಂದು ಕಾಲಾವಕಾಶ ನೀಡಲು ಕೋರ್ಟ್ ನಿರಾಕರಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು: ಟ್ರಿಬ್ಯೂನಲ್ ವಿರುದ್ಧ ಉಗ್ರಪ್ಪ ವಾಗ್ದಾಳಿ