Daily Horoscope

ಮಾ. 7 ರ ಒಳಗೆ ಖಾಸಗಿ ಟ್ಯಾಂಕರ್‌ಗಳ ಪರವಾನಗಿ ಕಡ್ಡಾಯ

geetha
ಶನಿವಾರ, 2 ಮಾರ್ಚ್ 2024 (15:40 IST)
ಬೆಂಗಳೂರು : ಬೋರ್‌ ವೆಲ್‌ ಗಳಿಂದ ಟ್ಯಾಂಕರ್‌ ಗಳನ್ನು ತುಂಬಿಸಿ ನೀರು ಪೂರೈಕೆ ಮಾಡುತ್ತಿರುವ ಎಲ್ಲಾ ಖಾಸಗಿ ಟ್ಯಾಂಕರ್‌ ಮಾಲಿಕರೂ  ಸಹ ಇದಕ್ಕೆ ಪರವಾನಗಿ ಪಡೆಯಬೇಕು. ಆರ್‌ಟಿಓ ,ಸಂಚಾರ ಪೊಲೀಸ್‌ ಇಲಾಖೆ ಮತ್ತು ಜಲಮಂಡಳಿಯ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ. ಎಲ್ಲಲ್ಲಿ ಕೊಳವೆ ಬಾವಿಗಳಿವೆ ಅವುಗಳನ್ನು ಗುರುತಿಸಿ ಅವುಗಳನ್ನು ಪರವಾನಗಿ ವ್ಯಾಪ್ಪಿಗೆ ಒಳಪಡಿಸಲಾಗುವುದು. ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಿಗೆ ಕುಡಿಯುವ ನೀರು ಪೂರೈಕೆಗೆ 10 ಕೋಟಿ ರೂ. ನೀಡಲಾಗಿದೆ ಎಂದರು. ಈ ಕುರಿತು ಸೋಮವಾರ ಮಧ್ಯಾಹ್ನ ಹಿರಿಯ ಅಧಿಕಾರಿಗಳ ಸಭೆ ಕರೆದಿರುವುದಾಗಿ ಡಿಕೆಶಿ ಹೇಳಿದರು. 

ರಾಜ್ಯದಲ್ಲಿ ದಿನೇ ದಿನೇ ನೀರಿನ ಸಮಸ್ಯೆ  ಉಲ್ಬಣಿಸುತ್ತಿದೆ. ಪರಿಸ್ಥಿತಿಯ ಲಾಭ ಪಡೆದು ಖಾಸಗಿ ನೀರಿನ ಟ್ಯಾಂಕರ್‌  ಗಳು ದುಬಾರಿ ಬೆಲೆಗೆ ನೀರನ್ನು ಮಾರಾಟ ಮಾಡುತ್ತಿದೆ. ನೀರು ಪೂರೈಕೆ  ಟ್ಯಾಂಕರ್‌ ಗಳ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹೊಸ ಕ್ರಮ ಕ್ಕೆ ಮುಂದಾಗಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ಯಾಂಕರ್‌ ಗಳ ಮಾಫಿಯಾ ನಿಯಂತ್ರಿಸಲು ಸೂಕ್ತ ನೀತಿ ರಚಿಸಲು ಬಿಬಿಎಂಪಿಗೆ ಆದೇಶಿಸಲಾಗಿದ್ದು, ಟ್ಯಾಂಕರ್‌ ಗಳನ್ನು ಸರ್ಕಾರವೇ ಸುಪರ್ದಿಗೆ ಪಡೆಯಲಿದೆ. ಮಾ. 7ರ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನೆಯ ವರಾಂಡದಲ್ಲಿ ಕೂತಿದ್ದ ವ್ಯಕ್ತಿಯತ್ತ ನುಗ್ಗಿದ ಕಾಡು ಹಂದಿ: ಎದೆ ಝಲ್ಲೆನಿಸುವ ವಿಡಿಯೋ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದ ಕೇಂದ್ರ: ಇದು ನಂಬಿಕೆ ದ್ರೋಹ ಎಂದ ರಣದೀಪ್ ಸುರ್ಜೇವಾಲ

ಅಲ್ಲೇ ಬಟ್ಟೆ ತೆಗಿ, ಸೆಲ್ಫೀ ಹೊಡಿ.. ಹೋಟೆಲ್ ಬಾಲ್ಕನಿಯಲ್ಲಿ ಮಹಿಳೆಯ ಅಸಭ್ಯ ವರ್ತನೆ: ವೈರಲ್ ಆದ video

ನನಗೆ ಮುಸ್ಲಿಮರೇ ಫಸ್ಟ್ ಎಂದ ತುಳು ಕಾಮಿಡಿ ನಟ ಅರವಿಂದ್ ಬೋಳಾರ್: ನೀವು ಯಾವ ಸೀಮೆ ಹಿಂದೂ ಎಂದು ನೆಟ್ಟಿಗರ ತರಾಟೆ Video

ಮುಂದಿನ ಸುದ್ದಿ
Show comments