Daily Horoscope

Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ಗ್ಯಾಸ್ ರೇಟ್ ಹೆಚ್ಚಿಸಿದ್ರೆ ಬಿಜೆಪಿಯವರು ಬೀದಿ ರಂಪ ಮಾಡ್ತಿದ್ರು: ಲಕ್ಷ್ಮಣ್

M Lakshman
ಮೈಸೂರು: ಕಾಂಗ್ರೆಸ್ ಸರ್ಕಾರವೇನಾದರೂ ಗ್ಯಾಸ್ ರೇಟ್ ಹೆಚ್ಚಿಸಿದ್ರೆ ಬಿಜೆಪಿ ನಾಯಕರು ಬೀದಿ ರಂಪಾಟ ಮಾಡ್ತಿದ್ರು ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ನಿನ್ನೆ ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ಮಾಡಿರುವುದರ ಕುರಿತು ಅವರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಕಮರ್ಷಿಯಲ್ ಸಿಲಿಂಡರ್ ದರವನ್ನು 993 ರೂ. ಗೆ ಏರಿಕೆ ಮಾಡಿದೆ. ಇದು ಶಾಕಿಂಗ್. ಇದು ಕೇವಲ ಹೋಟೆಲ್ ನಡೆಸುವವರಿಗೆ, ಡಾಬಾ ನಡೆಸುವವರಿಗೆ ಪರಿಣಾಮ ಬೀರುವಂತದ್ದಲ್ಲ.

ಈ ದರ ಏರಿಕೆಯನ್ನು ಅವರು ನೇರವಾಗಿ ಗ್ರಾಹಕರ ಮೇಲೆ ಹಾಕ್ತಾರೆ. 1740 ರೂ. ಇದ್ದ 19 ಕೆ.ಜಿ. ಸಿಲಿಂಡರ್ ದರ ಈಗ 3000 ರೂ. ಮೀರಿದೆ. ಇದರ ಮೇಲೆ 18% ಜಿಎಸ್ ಟಿ ಬೇರೆ. ಈ ವಿಶ್ವಗುರು ಮತ್ತು ಅಮಿತ್ ಶಾ ಐದು ರಾಜ್ಯಗಳ ಚುನಾವಣೆ ನಡೆಯುವಾಗ ಯಾವುದೇ ಕಾರಣಕ್ಕೂ ಸಿಲಿಂಡರ್ ದರ ಏರಿಕೆ ಮಾಡಲ್ಲ ಎಂದು ಹೇಳ್ತಾನೇ ಇದ್ರು. ಇದೀಗ ಚುನಾವಣೆ ಮುಗಿದ ತಕ್ಷಣವೇ ದರ ಏರಿಕೆ ಮಾಡಿದ್ದಾರೆ.

ಇದೇ ಕಾಂಗ್ರೆಸ್ ಸರ್ಕಾರ ಇದ್ದು ದರ ಏರಿಕೆ ಮಾಡಿದ್ದರೆ ಇದೇ ಬಿಜೆಪಿಯ ಆರ್ ಅಶೋಕ್ ಮತ್ತಿತರರು ಬೀದಿ ರಂಪ ಮಾಡ್ತಿದ್ರು ಎಂದು ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ. ಶಿವಕುಮಾರ್ ಬಾಳಲ್ಲಿ ಮಹಾಲಕ್ಷ್ಮಿಯ ಆಗಮನ: ರಾಜಕೀಯ ಅದೃಷ್ಟ ಬದಲಾಗಲಿದೆಯೇ