Webdunia - Bharat's app for daily news and videos

Install App

ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಎಂ. ಬಿ. ಪಾಟೀಲ್ ಭೇಟಿ

Webdunia
ಶನಿವಾರ, 5 ಮಾರ್ಚ್ 2022 (18:07 IST)
ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಪಕ್ಷದ ಬೆಳವಣಿಗೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಧಿಕಾರ ಗದ್ದುಗೆ ಏರಲು ಎಲ್ಲರೂ ಒಟ್ಟಾಗಿ ಹೋಗುವ ಪ್ರಯತ್ನ ಈಗ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ.
ಸಿದ್ದ ರಾಮಯ್ಯ ಬಣದ ಜತೆ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲ್ ಹಾಗೂ ಶಿವಕುಮಾರ್ ಮಧ್ಯೆ ಒಳ್ಳೆಯ ಸಂಬಂಧವಿರಲಿಲ್ಲ. ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆ ಪ್ರಯತ್ನಕ್ಕೆ ಕೈ ಹಾಕಿ ತಪ್ಪು ಮಾಡಿದೆವು ಎಂದು ಶಿವಕುಮಾರ್ ಹೇಳಿಕೆ‌ ನೀಡಿದ ಬಳಿಕವಂತೂ ಆ ಸಂಬಂಧ ಇನ್ನಷ್ಟು ಹದೆಗೆಟ್ಟಿತ್ತು. ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದಷ್ಟು ಇಬ್ಬರೂ ದೂರವಾಗಿದ್ದರು. ಆದರೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವುದರಿಂದ ಹೈಕಮಾಂಡ್ ಸೂಚನೆ ಮೇರೆ ಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನಕ್ಕೆ ಶಿವಕುಮಾರ್ ಕೈ ಹಾಕಿದ್ದಾರೆ. ಜತೆಗೆ ಪಾಟೀಲ್ ಪ್ರಚಾರ ಸಮಿತಿ ಅಧ್ಯಕ್ಷ ರೂ ಆಗಿರುವುದರಿಂದ ಸಮನ್ವಯ ಸಾಧಿಸಿಕೊಳ್ಳುವುದು ಇಬ್ಬರಿಗೂ ಅನಿವಾರ್ಯವಾಗಿದೆ. ಹೀಗಾಗಿ ಇಬ್ಬರೂ ಚರ್ಚೆಯ ಮೂಲಕ ಬೇಸರ ಸರಿಪಡಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗುತ್ತೆ: ಆರ್‌ ಅಶೋಕ್

ಈ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲದು: ವಿಜಯೇಂದ್ರ ಎಚ್ಚರಿಕೆ, Video

ಮಳೆಗೆ ಲಿಫ್ಟ್ ನೀಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ ರೇಪ್‌

ಭಾರತಕ್ಕೆ 4 ಚಿನ್ನದ ಪದಕ ತಂದ ಥ್ರೋಬಾಲ್ ತಾರೆಗೆ ಜೀವನಕ್ಕೆ ತರಕಾರಿ ಮಾರಾಟ, ಕ್ಯಾಬ್ ಗತಿ, Video

ನೇಪಾಳದ ಪ್ರವಾಹದಲ್ಲಿ ಪತ್ನಿಯ ಕಿಡ್ನಿ ಚಿಕಿತ್ಸೆಗಾಗಿ ಕೂಡಿಟ್ಟ ₹25ಲಕ್ಷ ಕಳೆದುಕೊಂಡ ಪತಿಯ ಕಣ್ಣೀರಿನ ವಿಡಿಯೋ

ಮುಂದಿನ ಸುದ್ದಿ
Show comments