Daily Horoscope

ಯುವಕ ಯುವತಿ ಪ್ರೇಮ ಪ್ರಕರಣ: ಎರಡು ಸಮುದಾಯಗಳ ಮಧ್ಯ ಘರ್ಷಣೆ

Webdunia
ಮಂಗಳವಾರ, 18 ಸೆಪ್ಟಂಬರ್ 2018 (17:02 IST)
ಯುವಕ ಯುವತಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯ ಘರ್ಷಣೆ ನಡೆದಿದೆ.

ದೂರು ನೀಡಲು ಬಂದ ಯುವಕನ ಮೇಲೆ  ಪಿ.ಎಸ್.ಐ‌ ಸೇರಿದಂತೆ ಹಾಗೂ ಇಬ್ಬರು ಪೊಲೀಸ್ ಪೇದೆಗಳಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ‌ 
ಯುವಕನನ್ನ ಹಿಗ್ಗಾ ಮುಗ್ಗಾ  ಪಿ.ಎಸ್.ಐ ಚಂದ್ರು ಹೆರಕಲ್ ಮತ್ತು ಪೇದೆಗಳು ಥಳಿಸಿದ್ದಾರೆ. ಘಟನೆಯಲ್ಲಿ ಪಾಂಡು ಮೈಲಾರ ಎಂಬ ಯುವಕನ ಕಾಲು, ತಲೆ, ಕೈಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಯುವಕನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೇ ಯುವಕನ ಸಂಬಂಧಿಕರ ಮೇಲೂ ಪೊಲೀಸರಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಹನುಮಪ್ಪ ದನಾಕಾಯೋರ, ಬಸಪ್ಪ ಹನುಮಪ್ಪ ಮೈಲಾರ, ಸುರೇಶ್ ಮೈಲಾರ, ದೇವರಾಜ ಮೈಲಾರ, ಭೀಮಪ್ಪ ದನಾಕಾಯೋರ ಎಂಬುವರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದವರು ಬಾದಾಮಿ ತಾಲೂಕಿನ ಚಿಂಚಲಕಟ್ಟಿ ಗ್ರಾಮದವರಾಗಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಆಗ ಪ್ರಕರಣ ಕೆರೂರು  ಪೊಲೀಸ್ ಠಾಣೆ  ಮಟ್ಟಿಲೇರಿತ್ತು. ಒಂದು ಗುಂಪಿನ ಪರವಾಗಿ ನಿಂತು ಪಿ.ಎಸ್.ಐ ಹೆರಕಲ್ ಯುವಕ ಹಾಗೂ ಆತನ ಕಡೆಯವರಿಗೆ ಥಳಿಸಿರುವುದಾಗಿ ಆರೋಪಿಸಲಾಗುತ್ತಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments