Select Your Language

Notifications

webdunia
webdunia
webdunia
webdunia

ಲಾಟರಿ ಹಗರಣ: ಡಿಜಿಪಿ ಓಂಪ್ರಕಾಶ್, ಕೆಂಪಯ್ಯ ಸಿಬಿಐ ವಿಚಾರಣೆ ಅಂತ್ಯ

ಲಾಟರಿ ಹಗರಣ
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2016 (18:34 IST)
ರಾಜ್ಯದಲ್ಲಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಓಂ ಪ್ರಕಾಶ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಸಲಹೆಗಾರ ಕೆಂಪಯ್ಯ ಅವರ ಸಿಬಿಐ ವಿಚಾರಣೆ ಅಂತ್ಯಗೊಂಡಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಡಿಜಿಪಿ ಓಂ ಪ್ರಕಾಶ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಸಲಹೆಗಾರ ಕೆಂಪಯ್ಯನವರಿಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಸಿಬಿಐ ವಿಚಾರಣೆಗೆ ಹಾಜರಾಗಿದ್ದರು.
 
ನವದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಇಂದು ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಸಿಬಿಐ ವಿಚಾರಣೆ ಇದೀಗ ಅಂತ್ಯಗೊಂಡಿದೆ. 
 
ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಹೊರ ರಾಜ್ಯಗಳಲ್ಲಿ ಮುದ್ರಿಸಿ ಕರ್ನಾಟಕದಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರು, ಹಿರಿಯ ಅಧಿಕಾರಿಗಳ ಸೂಚನೆಯಂತೆ ಸುಮ್ಮನಿದ್ದರು. ಇದಕ್ಕಾಗಿ ಪೊಲೀಸ್ ಪೊಲೀಸ್ ಇಲಾಖೆಗೆ ಕಪ್ಪು ಕಾಣಿಕೆ ಸಲ್ಲುತ್ತಿತ್ತು ಎಂದು ಆರೋಪ ಮಾಡಲಾಗಿತ್ತು. 
 
ಬಹುಕೋಟಿ ಒಂದಂಕಿ ಲಾಟರಿ ದಂಧೆ ರೂವಾರಿ ಪಾರಿ ರಾಜನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯಕ್ತರಾದ ಅಲೋಕ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ವಿವಾದ: ರಾಜ್ಯದ ಪರ ವಕೀಲ ನಾರಿಮನ್ ಭೇಟಿಗೆ ತೆರಳಲಿರುವ ಸಚಿವರು