ಬೆಂಗಳೂರು: ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಅರಂಭವಾಗಿದ್ದು, ಇದರ ಪರಿಣಾಮ ಜನ ಸಾಮಾನ್ಯರಿಗೆ ತಟ್ಟಲಿದೆ. ಲಾರಿ ಮುಷ್ಕರದಿಂದ ಯಾವೆಲ್ಲಾ ವಸ್ತುಗಳಲ್ಲಿ ವ್ಯತ್ಯಯವಾಗಬಹುದು ಇಲ್ಲಿದೆ ನೋಡಿ ವಿವರ.
ನಮ್ಮ ದೈನಂದಿನ ಅಗತ್ಯಗಳಿಗೆ ಬೇಕಾದ ದಿನಸಿ ಸಾಮಗ್ರಿಗಳು, ಹಣ್ಣು-ತರಕಾರಿಗಳ ಸಾಗಣೆಗೆ ಸರಕು ಲಾರಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಈಗ ಲಾರಿ ಮುಷ್ಕರದಿಂದಾಗಿ ಹೊರ ರಾಜ್ಯಗಳಿಂದ ನಮ್ಮಲ್ಲಿಗೆ ಮತ್ತು ನಮ್ಮಲ್ಲಿಂದ ಹೊರ ರಾಜ್ಯಗಳಿಗೆ ಸರಕು ಸಾಗಣೆ ಲಾರಿಗಳು ಸಂಚರಿಸುತ್ತಿಲ್ಲ. ಇದರ ನೇರ ಪರಿಣಾಮ ಜನ ಸಾಮಾನ್ಯರಿಗೆ ತಟ್ಟಲಿದೆ.
ಯಾವೆಲ್ಲಾ ವಸ್ತುಗಳು ವ್ಯತ್ಯಯವಾಗಲಿದೆ?
-ಈರುಳ್ಳಿ, ಬೆಳ್ಳುಳ್ಳಿಯಂತಹ ಆಹಾರ ವಸ್ತುಗಳು
-ತರಕಾರಿ, ಹಣ್ಣುಗಳ ಪೂರೈಕೆ ವ್ಯತ್ಯಯವಾಗಬಹುದು.
-ಜಲ್ಲಿ ಕಲ್ಲು, ಸಿಮೆಂಟ್, ಮರಳು ಸಾಗಣೆ ಇರುವುದಿಲ್ಲ. ಇದು ಕಟ್ಟಡ ಕಾಮಗಾರಿಗಳಿಗೆ ತೊಂದರೆ ನೀಡಲಿದೆ.
-ಎಲ್ ಪಿಜಿ ಸಿಲಿಂಡರ್ ಪೂರೈಗೆ ವಿಳಂಬವಾಗಬಹುದು.
-ಪೆಟ್ರೋಲ್, ಡೀಸೆಲ್ ಪೂರೈಕೆಗೆ ತೊಂದರೆಯಾಗಬಹುದು.
-ಅಕ್ಕಿ, ಬೇಳೆಯಂತಹ ಪ್ರಮುಖ ಧಾನ್ಯಗಳ ಪೂರೈಕೆಗೆ ಅಡ್ಡಿಯಾಗಬಹುದು.
ಲಾರಿ ಮಾಲಿಕರ ಸಂಘ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಮಾಡುತ್ತಿವೆ. ಏಪ್ರಿಲ್ 14 ರವರೆಗೂ ಸರ್ಕಾರಕ್ಕೆ ಗಡುವು ವಿಧಿಸಲಾಗಿತ್ತು. ಆದರೆ ತಮ್ಮ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮುಷ್ಕರ ಶುರು ಮಾಡಲಾಗಿದೆ.