Select Your Language

Notifications

webdunia
webdunia
webdunia
webdunia

5ನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ

5ನೇ ದಿನಕ್ಕೆ ಕಾಲಿಟ್ಟ ಲಾರಿ ಮಾಲೀಕರ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ
ಬೆಂಗಳೂರು , ಸೋಮವಾರ, 3 ಏಪ್ರಿಲ್ 2017 (10:30 IST)
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ ನೇ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ದಕ್ಷಿಣಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಬಂದ್`ಗೆ ಕರೆ ನೀಡಿವೆ. ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ಲಾರಿ ಮಾಲೀಕರು ಬಂದ್`ಗೆ ಕರೆ ನೀಡಿದ್ದಾರೆ.

ಲಾರಿ ಮುಷ್ಕರದಿಂದಾಗಿ ಈಗಾಗಲೇ ಸರಕು ಸಾಗಣೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಇನ್ನುಮುಂದೆ ತರಕಾರಿ, ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜನ್ನೂ ಸ್ಥಗಿತಗೊಳಿಸಿ ಬಂದ್ ತೀವ್ರತೆ ಹೆಚ್ಚಿಸಲು ಲಾರೀ ಮಾಲೀಕರು ಚಿಂತಿಸಿದ್ದಾರೆ.

ಈಗಾಗಲೇ 22 ಲಕ್ಷ ಲಾರಿಗಳು ಬಂದ್`ನಲ್ಲಿ ಪಾಲ್ಗೊಂಡಿದ್ದು, ಇವತ್ತಿನಿಂದ ಇನ್ನೂ 7 ಲಕ್ಷ ಲಾರಿಗಳು ಮುಷ್ಕರಕ್ಕೆ ಸಾಥ್ ನಿಡಲಿವೆ. ಲಾರಿಗಳ ವಿಮೆ ಕಂತು ಹೆಚ್ಚಳ, 15 ವರ್ಷಗಳ ಹಳೆಯ ವಾಹನಗಳ ನಿಷೇಧ, ಆರ್`ಟಿಓ ಶುಲ್ಕ ಹೆಚ್ಚಳ ಇವೇ ಮುಂತಾದ ಕೇಂದ್ರಗಳ ಕ್ರಮಗಳನ್ನ ವಿರೋಧಿಸಿ ಬಂದ್`ಗೆ ಕರೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಸ್ಮೃತಿ ಇರಾನಿ ಕಾರನ್ನು ಯುವಕರು ಚೇಸ್ ಮಾಡಿದ್ದರ ಕಾರಣ ಬಯಲು!