Publish Date: Thu, 15 Jun 2017 (18:20 IST)
Updated Date: Thu, 15 Jun 2017 (18:23 IST)
ಬೆಂಗಳೂರು: ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ.. ಎಂದು ಲಾರಿ ಡ್ರೈವರ್ ಒಬ್ಬ ಮಹಿಳೆಯೊಬ್ಬರಿಗೆ ಚುಡಿಸಿದ್ದಕ್ಕೆ ಕೋಪಗೊಂಡ ಮಹಿಳೆ ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ನಡೆದಿದೆ.
ಅಂಬರೀಷ್ ಎಂಬ ಲಾರಿ ಚಾಲಕ ಮಹಿಳೆ ದಾರಿಯಲ್ಲಿ ಹೋಗುತ್ತಿದ್ದಾಗ ಲಾರಿ ಅಡ್ಡಹಾಕಿ ಹೇ ಬುಲ್ ಬುಲ್ ಮಾತಾದಕ್ಕಿಲ್ವಾ ಎಂದು ಡೈಲಾಗ್ ಹೊಡೆದಿದ್ದಾನೆ. ಸಿಟ್ಟಿಗೆದ್ದ ಮಹಿಳೆ ಗಲಾಟೆ ಮಾಡಿ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರ ಎದುರೇ ಮಹಿಳೆ ಲಾರಿ ಚಾಲಕನ ಮುಖಕ್ಕೆ ಸರಿಯಾಗಿ ಗುದ್ದಿ, ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಈ ಹಿಂದೆಯೂ ಈ ವ್ಯಕ್ತಿ ಮಹಿಳೆಯರನ್ನು ಚುಡಾಯಿಸುತ್ತಿದ್ದ ಎನ್ನಲಾಗಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.