ಲಾಕ್ ಡೌನ್ ಸಡಿಲಿಕೆ : ಡಿಸಿ ಗಳಿಗೆ ಖಡಕ್ ಸೂಚನೆ

Webdunia
ಶನಿವಾರ, 25 ಏಪ್ರಿಲ್ 2020 (14:38 IST)
ಲಾಕ್ ಡೌನ್ ವಿನಾಯಿತಿ ಮೇ 3 ರಿಂದ ನೀಡುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು.

ಕೋವಿಡ್ -19 ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಉದಾಸೀನತೆ ತೋರುವಂತಿಲ್ಲ. ಪ್ರತಿಯೊಬ್ಬರೂ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್‍ಭಾಸ್ಕರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು,  ಬೆಂಗಳೂರಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ 24 ಜನರಿಗೆ ಕೊರೋನಾ ಸೋಂಕು ಹರಡಿದೆ. ಇದೇ ರೀತಿ ಮುಂದುವರೆದರೆ ಪ್ರಕರಣಗಳು ಹೆಚ್ಚಾಗುತ್ತವೆ. ಹಾಗಾಗಿ ಕೊರೋನಾ ಸೋಂಕಿತರೊಡನೆ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು ಹಾಗೂ ಅವರ ಮೇಲೆ ನಿಗಾವಹಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದಿದ್ದಾರೆ.

ಲಾಕ್ ಡೌನ್ ಮುಗಿದ ನಂತರ ಹೊರ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಅವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಇಡಬೇಕಾಗುತ್ತದೆ. ಕ್ವ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ಹಾಗೂ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು ಜಿಯೋ ಫೆನ್ಸಿಂಗ್ ಅನ್ನು ಕಾಲ್ ಸೆಂಟರ್‍ಗಳಿಗೆ ಲಿಂಕ್ ಮಾಡಿ.

ಪ್ರಥಮ ಹಾಗೂ ದ್ವತೀಯ ಸಂಪರ್ಕ ಹೊಂದಿದವರು ಜಿಯೋ ಫೆನ್ಸಿಂಗ್ ದಾಟಿದ ಕೂಡಲೇ ಅವರಿಗೆ ಕರೆ ಹೋಗುವಂತೆ ವ್ಯವಸ್ಥೆ ಮಾಡಿ. ಈ ರೀತಿ ಮಾಡಿದರೆ ಸುಲಭವಾಗಿ ಕಾರ್ಯ ಸಾಧಿಸಬಹುದು ಎಂದರಲ್ಲದೇ ಈ ವ್ಯವಸ್ಥೆಯನ್ನು ಮುಂದಿನ ಮೂರು ದಿನಗಳಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಅಳವಡಿಸಿ ಎಂದು ಅವರು ಹೇಳಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ ಫ್ಲೈ ಓವರ್ ಬೇಡವೇ ಬೇಡ: ಸಿಎಂಗೆ ಪತ್ರ ಬರೆದ ಸಂಸದ ಯದುವೀರ್ ಒಡೆಯರ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿಯೋ ಫೋನ್ ನಲ್ಲಿ ಬಳಸಿದ್ರೆ ಅದಾನಿಗೆ ದುಡ್ಡು: ರಾಹುಲ್ ಗಾಂಧಿ ಹೇಳಿಕೆ ಭಾರೀ ಟ್ರೋಲ್ video

ಹೃದಯದ ಆರೋಗ್ಯಕ್ಕೆ ಡಾ ದೇವಿಪ್ರಸಾದ್ ಶೆಟ್ಟಿಯವರ ಈ ಟಿಪ್ಸ್ ತಪ್ಪದೇ ಫಾಲೋ ಮಾಡಿ

ಮುಂದಿನ ಸುದ್ದಿ
Show comments