Select Your Language

Notifications

webdunia
webdunia
webdunia
webdunia

ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ

Linking of Aadhaar to Voter ID is not mandatory
bangalore , ಮಂಗಳವಾರ, 23 ಆಗಸ್ಟ್ 2022 (19:57 IST)
ಮತದಾರರು ವೋಟರ್ ಐಡಿಗೆ ಆಧಾರ್ ನಂಬರ್​​ ಲಿಂಕ್ ಮಾಡಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ ಚುನಾವಣೆ ಆಯೋಗವು ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ. ಮತದಾರರು ಸ್ವಯಂ ಪ್ರೇರಿತರಾಗಿ ಆಧಾರ್ ಅಥವಾ ಇತರೆ ನಿಗದಿತ ದಾಖಲೆಗಳ ಮೂಲಕವೂ ದೃಢೀಕರಿಸಿ ಜೋಡಣೆ ಮಾಡಬಹುದಾಗಿದೆ ಎಂದು ತಿಳಿಸಿದೆ. ಮಾಧ್ಯಮಗಳಲ್ಲಿ ವರದಿಯಾದ ವರದಿಗಳನ್ನು ಉಲ್ಲೇಖಿಸಿ, ಫಾರ್ಮ್ -6 ಬಿ ಯಲ್ಲಿ ಆಧಾರ್ ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ ಎಂಬುದನ್ನು ಗಮನಿಸಬಹುದು. ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನು ಅಳಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ, ಮಲೆನಾಡಿನಲ್ಲಿ ಎಲ್ಲೊ ಅಲರ್ಟ್​