Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ವಿರುದ್ಧ ಲಿಂಗಾಯುತ ಮುಖಂಡರ ಧರಣಿ

ಯಡಿಯೂರಪ್ಪ ವಿರುದ್ಧ ಲಿಂಗಾಯುತ ಮುಖಂಡರ ಧರಣಿ
ಬೆಂಗಳೂರು , ಶನಿವಾರ, 10 ಜೂನ್ 2017 (13:20 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ವ್ಯಾಪ್ತಿ ಮೀರಿ 257 ಎಕರೆ ಡಿನೋಟಿಫೈ ಮಾಡಿದ್ದರು ಎಂದು ಆರೋಪಿಸಿ ಲಿಂಗಾಯುತ ಮುಖಂಡರು ಮೌರ್ಯ ವೃತ್ತದಲ್ಲಿ ಧರಣಿ ನಡೆಸಿದ್ದಾರೆ. 
 
ಬಿಎಸ್‌ವೈ ಸಿಎಂ ಆಗಿದ್ದಾಗ ಡಿನೋಟಿಪಿಕೇಶನ್ ಆರೋಪ 200ರಲ್ಲಿ ಶಿವರಾಮ ಕಾರಂತ ಬಡಾವಣೆಗೆ ಅಧಿಸೂಚನೆ ಹೊರಡಿಸಿ 3546 ಎಕರೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಡಿನೋಟಿಫೈ ತೆರುವುಗೊಳಿಸುವಂತೆ ರೈತರು ಒತ್ತಡ ಹೇರಿದರೂ ಕ್ರಮಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
 
ಯಡಿಯೂರಪ್ಪ ಅವರು ಡಿನೋಟಿಫೈ ಮಾಡಿದ 257 ಎಕರೆ ಭೂಮಿ ಲೇಔಟ್ ಮಧ್ಯಭಾಗದಲ್ಲಿದೆ. ಕೂಡಲೇ ಆ ಸ್ಥಳವನ್ನು ತೆರುವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಯಡಿಯೂರಪ್ಪ ವಿರುದ್ಧ ಅಧಿಕಾರ ವ್ಯಾಪ್ತಿ ಮೀರಿ ಡಿನೋಟಿಫೈ ಮಾಡಿದ್ದಕ್ಕಾಗಿ ಸರಕಾರವಾದರೂ ಎಫ್‌‍ಐಆರ್ ದಾಖಲಿಸಬೇಕಾಗಿತ್ತು ಎಂದು ಲಿಂಗಾಯುತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.    

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹರಕೆ ಕಾಯಿ ಕಟ್ಟಿದ ಸಚಿವ ಡಿಕೆ ಶಿವಕುಮಾರ್